ಇಂಗ್ಲೆಂಡಿನಲ್ಲಿರುವ ಐಪಿಲ್ ಚೇರ್ ಮೆನ್ ಲಲಿತ್ ಮೋದಿಯವರನ್ನು ಭಾರತಕ್ಕೆ ಕರೆಸಲು ಪತ್ರ ಬರೆಯಲು ಅನುಮತಿ ಕೋರಿ ಜಾರಿ ನಿರ್ದೆಶನಾಲಯ ಸಲ್ಲಿಸಿದ್ದ ಅರ್ಜಿಗೆ ಮುಂಬೈ ನ್ಯಾಯಾಲಯ ಅವಕಾಶ ನೀಡಿದೆ.
ನವದೆಹಲಿ (ನ.16): ಇಂಗ್ಲೆಂಡಿನಲ್ಲಿರುವ ಐಪಿಲ್ ಚೇರ್ ಮೆನ್ ಲಲಿತ್ ಮೋದಿಯವರನ್ನು ಭಾರತಕ್ಕೆ ಕರೆಸಲು ಪತ್ರ ಬರೆಯಲು ಅನುಮತಿ ಕೋರಿ ಜಾರಿ ನಿರ್ದೆಶನಾಲಯ ಸಲ್ಲಿಸಿದ್ದ ಅರ್ಜಿಗೆ ಮುಂಬೈ ನ್ಯಾಯಾಲಯ ಅವಕಾಶ ನೀಡಿದೆ.
ಲಲಿತ್ ಮೋದಿಯವರು ಇಂಗ್ಲೆಂಡಿಗೆ ಹೋದಾಗಿನಿಂದ ಅವರ ವಿರುದ್ಧ ಜಾಮೀನುರಹಿತ ವಾರೆಂಟನ್ನು ಜಾರಿಗೊಳಿಸಲು ಸಾಧ್ಯವಾಗುತ್ತಿಲ್ಲ. ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸುವ ಅಗತ್ಯವಿದೆ. ಹಾಗಾಗಿ ಅವರನ್ನು ಇಂಗ್ಲೆಂಡಿನಿಂದ ಭಾರತಕ್ಕೆ ಗಡಿಪಾರು ಮಾಡುವಂತೆ ಪತ್ರ ಬರೆಯಲು ಅನುಮತಿ ನೀಡಿ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ. ಇದಕ್ಕೆ ನ್ಯಾಯಾಲಯ ಅನುಮತಿ ನೀಡಿದೆ.
