ಇದಲ್ಲದೆ ಇಲಾಖೆಯ ಬೈಕ್, ಜೀಪ್ ಗಳನ್ನ ಹೊರತು ಪಡಿಸಿದರೆ ಸ್ವಂತ ವಾಹನಗಳ ಮೇಲೆ ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಳ್ಳೋ ಹಾಗಿಲ್ಲ.

ಚಿಕ್ಕಮಗಳೂರು(ಆ.02): ಬೈಕ್ ಸವಾರರು ಹೆಲ್ಮೆಟ್ ಧರಿಸಿಯೇ ರೈಡ್ ಮಾಡಬೇಕು ಅನ್ನೋ ಕಾನೂನು ಬಂದರೂ ಕೆಲವೊಂದೆಡೆ ಯಶಸ್ವಿಯಾಗಿಲ್ಲ. ಅದರೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೈಕ್ ಏರಿದರೆ ಮೊದಲು ನೆನಪಾಗೋದು ಹೆಲ್ಮೆಟ್ ಇಲ್ಲ ಅಂತಾ .

ಗಲ್ಲಿ ಗಲ್ಲಿಗೂ ಹೋದರೂ ಕಾದು ಕುಳಿತು ಕೇಸ್ ಅಂತಾರೆ ಅನ್ನೋ ಭಯ ಬೈಕ್ ಸವಾರರಲ್ಲಿದೆ. ಈ ರೀತಿ ಖಡಕ್ ಆದೇಶ ಹೊರಡಿಸಿರುವುದು ಎಸ್ಪಿ ಅಣ್ಣಾಮಲೈ. ಪೊಲೀಸರಿಗೆ ಖಡಕ್ ಆದೇಶ ನೀಡಿರುವುದರಿಂದ ಜನರು ನಿಯಮ ಮೀರಿದರೆ ದಂಡ ಹಾಕಲು ಜಿಲ್ಲೆಯಲ್ಲಡೆ ಅಲಾರ್ಟ್ ಆಗಿದ್ದಾರೆ. ಇದಲ್ಲದೆ ಇಲಾಖೆಯ ಬೈಕ್, ಜೀಪ್ ಗಳನ್ನ ಹೊರತು ಪಡಿಸಿದರೆ ಸ್ವಂತ ವಾಹನಗಳ ಮೇಲೆ ಪೊಲೀಸ್ ಸ್ಟಿಕ್ಕರ್ ಅಂಟಿಸಿಕೊಳ್ಳೋ ಹಾಗಿಲ್ಲ. ಇನ್ನೂ ಪೊಲೀಸ್ ಅಂತಾ ಬರೆಸಿಕೊಂಡಿರೋ ಬೈಕ್ ಗಳನ್ನ ಸೇಲ್ ಮಾಡಿದರೂ ಖರೀದಿ ಮಾಡಿದವರು ಪೊಲೀಸ್ ಸ್ಟಿಕರ್ ತೆಗೆಯದೆ ಹಾಗೇ ಓಡಿಸ್ತಾರೆ ಅನ್ನೋ ಆರೋಪವು ಕೇಳಿ ಬಂದಿತ್ತು. ಪೊಲೀಸ್ ಸ್ಟೀಕರ್ ತೆಗೆಸಿ ಸಾರ್ವಜನಿಕರಂತೆ ಹೆಲ್ಮೆಟ್ ಹಾಕಿಕೊಂಡು ಬೈಕ್ ರೈಡ್ ಮಾಡಿ ಅಂತಾ ಅದೇಶ ಹೊರಡಿಸಿರುವ ಅಣ್ಣಾಮಲೈ ಹೊಸ ನಿಯಮ ಜನರಲ್ಲಿ ಪ್ರಶಂಸೆ ಮೂಡಿಸಿದೆ