ಸೌತ್‌ ಡಕೋಟಾ[ಆ.21]: ಕಿಡ್ನಿಯಲ್ಲಿ ಕಲ್ಲಿರಬಹುದು ಎಂದು ಯೋಚಿಸಿ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಹೋದ ಮಹಿಳೆಯೊಬ್ಬರು 3 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಹಾಗೂ ವಿಚಿತ್ರ ಘಟನೆ ಅಮೆರಿಕದ ಸೌತ್‌ ಡಕೋಟಾದಲ್ಲಿ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಸ್ಟುರ್ಗಿಸ್‌ ನಗರದ ಡ್ಯಾನೆಟ್‌ ಗಿಲ್ಟ್ಜ್ ಎಂಬುವರೇ ಆಗಸ್ಟ್‌ 10ರಂದು ಮೂರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.

ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದ ಡ್ಯಾನೆಟ್‌ ಗಿಲ್ಟ್ಜ್ ಅವರಿಗೆ, ತಾವು 34 ವಾರಗಳ ಗರ್ಭಿಣಿ ಎಂಬುದೇ ಗೊತ್ತಿರಲಿಲ್ಲ. ಆದರೆ, ತನ್ನ ಹೊಟ್ಟೆನೋವಿಗೆ ಕಿಡ್ನಿಯಲ್ಲಿ ಸಿಲುಕಿರಬಹುದಾದ ಕಲ್ಲುಗಳೇ ಕಾರಣ ಎಂದು ಭಾವಿಸಿ, ಇದಕ್ಕಾಗಿ ಸರ್ಜರಿ ಮಾಡಿಸಿಕೊಳ್ಳೋಣ ಎಂದು ಈಕೆ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಆದರೆ, ಈ ವೇಳೆ ಮಹಿಳೆ ಗರ್ಭಿಣಿಯಾಗಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ಇದಾಗಿ ನಾಲ್ಕು ನಿಮಿಷಗಳಲ್ಲಿ ಮಹಿಳೆ 3 ಮಕ್ಕಳಿಗೆ ಜನ್ಮ ನೀಡಿದ್ದು, ಪ್ರತೀ ಹಸುಗೂಸು 1.8 ಕೇಜಿ ತೂಕವಿದೆ.