ಸರಿಯಾಗಿ ಬಂದ್ ಮಾಡದ ಕೊಳಾಯಿಯಲ್ಲಿ ನೀರು ಸೋರುತ್ತಿರುತ್ತದೆ. ಅದು ನಲ್ಲಿಯ ಕೆಳಗಿರುವ ಪಾತ್ರೆ ಅಥವಾ ಬಕೆಟ್ ನೀರಿನ ಮೇಲೆ ಬಿದ್ದು ಒಂದು ವಿಚಿತ್ರ ಶಬ್ದ ಮಾಡುತ್ತದೆ. ಅದರ ಕಿರಿಕಿರಿ ಸಹಿಸಲಾಗದೆ ಎದ್ದು ಹೋಗಿ ಸರಿಯಾಗಿ ನಲ್ಲಿಯನ್ನೇನೋ ಬಂದ್ ಮಾಡಿ ಬರುತ್ತೀರಿ. 

ನವದೆಹಲಿ: ಸರಿಯಾಗಿ ಬಂದ್ ಮಾಡದ ಕೊಳಾಯಿಯಲ್ಲಿ ನೀರು ಸೋರುತ್ತಿರುತ್ತದೆ. ಅದು ನಲ್ಲಿಯ ಕೆಳಗಿರುವ ಪಾತ್ರೆ ಅಥವಾ ಬಕೆಟ್ ನೀರಿನ ಮೇಲೆ ಬಿದ್ದು ಒಂದು ವಿಚಿತ್ರ ಶಬ್ದ ಮಾಡುತ್ತದೆ. ಅದರ ಕಿರಿಕಿರಿ ಸಹಿಸಲಾಗದೆ ಎದ್ದು ಹೋಗಿ ಸರಿಯಾಗಿ ನಲ್ಲಿಯನ್ನೇನೋ ಬಂದ್ ಮಾಡಿ ಬರುತ್ತೀರಿ. 

ಆದರೆ ಕಿರಿಕಿರಿ ಉಂಟು ಮಾಡಿದ ಶಬ್ದದ ಮೂಲ ಯಾವುದೆಂದು ಯೋಚಿಸಿದ್ದೀರಾ? ದೀರ್ಘ ಕಾಲದಿಂದ ರಹಸ್ಯವಾಗಿದ್ದ ಈ ವಿಷಯವನ್ನು ಕೊನೆಗೂ ಪತ್ತೆ ಹಚ್ಚಿರುವುದಾಗಿ ಎಂಜಿನಿಯರ್‌ಗಳ ತಂಡವೊಂದು ಹೇಳಿಕೊಂಡಿದೆ. ನಲ್ಲಿಯಿಂದ ನೀರಿನ ಹನಿ ಅದರ ಕೆಳಭಾಗದಲ್ಲಿರುವ ನೀರಿನ ಮೇಲೆ ಬಿದ್ದಾಗ ಪ್ಲಿಂಕ್, ಪ್ಲಿಂಕ್, ಪ್ಲಿಂಕ್ ಎಂಬ ಶಬ್ದ ಬರುತ್ತದೆ. ಇದು ನೀರು ಬಿದ್ದ ರಭಸಕ್ಕೆ ಅಥವಾ ಬಿದ್ದ ಪರಿಣಾಮದಿಂದ ಬರುವ ಶಬ್ದವಲ್ಲ. 

ಬದಲಿಗೆ ನೀರಿನೊಳಗಿನ ಗಾಳಿ ಗುಳ್ಳೆಯ ಶಬ್ದ ಎಂದು ಕೇಂಬ್ರಿಜ್ ವಿವಿ ಎಂಜಿನಿಯರ್‌ಗಳು ಕಂಡುಕೊಂಡಿದ್ದಾರೆ. ಹೈಸ್ಪೀಡ್ ಕ್ಯಾಮೆರಾ ಹಾಗೂ ಧ್ವನಿ ಗ್ರಹಿಸುವ ತಂತ್ರಗಳನ್ನು ಬಳಸಿ ಈ ಸಂಶೋಧನೆಯನ್ನು ಮಾಡಲಾಗಿದೆ. ಈ ಬಗ್ಗೆ 20ನೇ ಶತಮಾನದ ಆರಂಭದಿಂದಲೂ ಸಂಶೋಧನೆ ನಡೆಯುತ್ತಿತ್ತು.

(ಸಾಂದರ್ಬಿಕ ಚಿತ್ರ)