Asianet Suvarna News Asianet Suvarna News

ದುಬೈಯಿಂದ ಮುಂಬೈಗೆ ಸಮುದ್ರದೊಳಗೆ ಹೈಸ್ಪೀಡ್‌ ರೈಲು!

ಲಂಡನ್‌ ಮತ್ತು ಪ್ಯಾರೀಸ್‌ ನಡುವೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್‌ ರೈಲ್ವೆ ಮಾದರಿಯಲ್ಲಿ ಮುಂಬೈ ಮತ್ತು ಯುಎಇ ನಡುವೆಯೂ ಸಾಗರ ಮಾರ್ಗವಾಗಿ ಸುರಂಗ ನಿರ್ಮಿಸಿ ಹೈಸ್ಪೀಡ್‌ ರೈಲು ನಿರ್ಮಾಣವಾಗಲಿದೆ ಎಂಬ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕ ಯೋಜನೆಯ ಕುರಿತ ಸಂಕ್ಷಿಪ್ತ ವಿವರ ಇಲ್ಲಿದೆ.

Soon you may enjoy underwater high-speed rail travel between Mumbai and UAE
Author
Mumbai, First Published Dec 2, 2018, 1:23 PM IST

2 ಸಾವಿರ ಮೈಲು ಸುರಂಗ ಮಾರ್ಗ

ದುಬೈ ಮತ್ತು ಮುಂಬೈ ನಡುವಿನ ದೂರ ಭೌಗೋಳಿಕವಾಗಿ 2 ಸಾವಿರ ಕಿ.ಮೀ ಅಂತರವಿದೆ. ಹೈಪರ್‌ಲೂಪ್‌ ಕೊಳವೆ ಆಕಾರದಲ್ಲಿ ಈ ರೈಲ್ವೆ ಯೋಜನೆ ನಿರ್ಮಾಣವಾಗಲಿದೆ. ಜೊತೆಗೆ ಸಮುದ್ರದಾಳದಲ್ಲಿ ಆಗುವ ಪ್ರಾಕೃತಿಕ ವಿಕೋಪಗಳನ್ನು ನಿಭಾಯಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗುತ್ತದೆ. ವರದಿಯ ಪ್ರಕಾರ ಹೈಸ್ಪೀಡ್‌ ರೈಲಿನಲ್ಲಿ ಅಯಸ್ಕಾಂತೀಯ ಶಕ್ತಿಯ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಇದು ರೈಲಿಗೆ ಭಾರೀ ವೇಗ ನೀಡಲಿದೆ. ಅಂದಾಜಿನ ಪ್ರಕಾರ ಗಂಟೆಗೆ 300 ಕಿ.ಮೀ ವೇಗದಲ್ಲಿ ಈ ರೈಲು ಪ್ರಯಾಣಿಸಲಿದೆ. ಈ ರೀತಿಯ ರೈಲುಗಳು ಈಗಾಗಲೇ ಜಪಾನ್‌ ಕೆನಡಾ, ಉತ್ತರ ಕೊರಿಯಾಗಳಲ್ಲಿವೆ. ಅಲ್ಲಿದೆ ಚೀನಾ, ಆಸ್ಪ್ರೇಲಿಯಾ, ಅಮೆರಿಕ, ಇಸ್ರೇಲ್‌ ತಮ್ಮ ದೇಶದಲ್ಲೂ ಅಭಿವೃದ್ಧಿಪಡಿಸುವ ಗುರಿ ಹೊಂದಿವೆ.

ಮಾತುಕತೆ ನಡೆದಿದ್ದು ಯಾವಾಗ?

ಅಬುಧಾಬಿಯಲ್ಲಿ ಯುಎಇ-ಭಾರತದೊಂದಿಗೆ ನಡೆದ ಸಮಾವೇಶದಲ್ಲಿ ಭಾರತ ಮತ್ತು ದುಬೈ ಸಾರಿಗೆ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೈಸ್ಪೀಡ್‌ ರೈಲಿನ ಕುರಿತು ಪ್ರಸ್ತಾಪಿಸಲಾಗಿತ್ತು. ನ್ಯಾಷನಲ… ಅಡ್ವೆಸೈರ್‌ ಬ್ಯೂರೋ ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಮತ್ತು ಮುಖ್ಯ ಸಲಹೆಗಾರರಾಗಿರುವ ಅಬ್ದುಲ್ಲಾ ಅಲ್‌ಶಾಹಿ ಅವರು, ಮುಂಬರುವ ದಿನಗಳಲ್ಲಿ ಭಾರತದೊಂದಿಗೆ ನಮ್ಮ ವ್ಯಾಪಾರ ಅಭಿವೃದ್ಧಿಗೆ ಮತ್ತೊಂದು ಆಯಾಮ ಸಿಗಲಿದೆ ಎಂದಿದ್ದಾರೆ. ಜೊತೆಗೆ ಯುಎಇಯ ಫುಜೈರಾಹ್‌ನಿಂದ ಭಾರತದ ಮುಂಬೈಗೆ ಸಂಪರ್ಕ ಕಲ್ಪಿಸುವ ಜಲಾಂತರ್ಗಾಮಿ ರೈಲ್ವೆ ಯೋಜನೆಯ ಕಾರ್ಯಸಾಧ್ಯತೆ ಕುರಿತಂತೆ ಅಧ್ಯಯನ ನಡೆಸಲು ತಜ್ಞರ ಸಮಿತಿ ರಚಿಸಲು ಸೂಚಿಸಿರುವ ದುಬೈ ಸರ್ಕಾರವು, ಪ್ರಯಾಣಿಕರ ಸೇವೆಯಷ್ಟೇ ಅಲ್ಲದೆ ವಾಣಿಜ್ಯ ವ್ಯಾಪಾರವನ್ನು ಸಹ ಇದೇ ಮಾರ್ಗದಲ್ಲಿ ಆರಂಭಿಸುವ ಉದ್ದೇಶ ಹೊಂದಿದೆ.

ತೈಲ ಆಮದು ನೀರು ರಫ್ತು!

ಪೈಲ್‌ಲೈನ್‌ ಮೂಲಕ ತೈಲ ಸರಬರಾಜು ಸೇರಿದಂತೆ ವಾಣಿಜ್ಯ ಸರಕುಗಳ ವಿನಿಯಮಕ್ಕೂ ಒಂದೇ ಮಾರ್ಗವನ್ನು ಬಳಕೆ ಮಾಡಿಕೊಳ್ಳುವ ಉದ್ದೇಶ ಇದೆ. ಭಾರತ ಯುಎಇ ಯಿಂದ ತೈಲ ಆಮದು ಮಾಡಿಕೊಂಡರೆ, ಯುಎಇಗೆ ಭಾರತ ನರ್ಮದಾ ನದಿಯ ಹೆಚ್ಚುವರಿ ನೀರು ಅಥವಾ ಇತರ ಸರಕುಗಳನ್ನು ರಫ್ತು ಮಾಡಲಿದೆ. ಇದರಿಂದ ವಿಮಾನಯಾನ ಸರಕು ಸಾಗಾಣಿಕೆಗಿಂತಲೂ ಕಡಿಮೆ ವೆಚ್ಚವಾಗುವುದರ ಜೊತೆಗೆ, ವಿದೇಶಿ ವಿನಿಯಮ ವಹಿವಾಟು ಕೂಡಾ ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನಲಾಗುತ್ತಿದೆ. ಈ ನಿರೀಕ್ಷಿತ ಯೋಜನೆ ಪ್ರಯಾಣಿಕ ಸೇವೆಗಿಂತ ವಾಣಿಜ್ಯ ವ್ಯಾಪರಕ್ಕೆ ಸಾಕಷ್ಟುಸಹಕಾರಿಯಾಗಲಿದೆ.

ಯೋಜನೆಯ ವೆಚ್ಚ ಎಷ್ಟು?

ಯುಎಇಯ ಫುಜೈರಾಹ್‌ನಿಂದ ಭಾರತದ ಮುಂಬೈಗೆ ಸಂಪರ್ಕ ಕಲ್ಪಿಸುವ ಜಲಾಂತರ್ಗಾಮಿ ರೈಲ್ವೆ ಯೋಜನೆಯ ಬಜೆಟ್‌ ಕುರಿತಂತೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಇದೊಂದು ಬೃಹತ್‌ ಬಂಡವಾಳದ ಯೋಜನೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂದಾಜೊಂದರ ಪ್ರಕಾರ ಕನಿಷ್ಠ 3 ಲಕ್ಷ ಕೋಟಿಯಿಂದ 5 ಲಕ್ಷ ಕೋಟಿ ರು. ಬಜೆಟ್‌ ಬೇಕಾಗಬಹುದು ಎನ್ನಲಾಗಿದೆ.

Follow Us:
Download App:
  • android
  • ios