ಮಾಜಿ ಸಂಸದ ಎಚ್. ವಿಶ್ವನಾಥ್ ಇನ್ನೇನು ಜೆಡಿಎಸ್ ಸೇರ್ಪಡೆಯಾಗಿಯೇ ಬಿಡುತ್ತಾರೆ ಎಂಬ ವಾತಾವರಣ ಕೆಲವು ದಿನಗಳ ಹಿಂದೆ ನಿರ್ಮಾಣವಾಗಿತ್ತು. ಇದೀಗ ನಿನ್ನೆ ಸಂಜೆ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುವ ಮೂಲಕ ವಿಶ್ವನಾಥ್ ಜೆಡಿಎಸ್ ಸೇರ್ಪಡೆ ವಿಚಾರ ಇನ್ನಷ್ಟು ಖಚಿತಗೊಂಡಿದೆ.
ಬೆಂಗಳೂರು(ಮೇ.17): ಮಾಜಿ ಸಂಸದ ಎಚ್. ವಿಶ್ವನಾಥ್ ಇನ್ನೇನು ಜೆಡಿಎಸ್ ಸೇರ್ಪಡೆಯಾಗಿಯೇ ಬಿಡುತ್ತಾರೆ ಎಂಬ ವಾತಾವರಣ ಕೆಲವು ದಿನಗಳ ಹಿಂದೆ ನಿರ್ಮಾಣವಾಗಿತ್ತು. ಇದೀಗ ನಿನ್ನೆ ಸಂಜೆ ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುವ ಮೂಲಕ ವಿಶ್ವನಾಥ್ ಜೆಡಿಎಸ್ ಸೇರ್ಪಡೆ ವಿಚಾರ ಇನ್ನಷ್ಟು ಖಚಿತಗೊಂಡಿದೆ.
ನಿನ್ನೆ ಬೆಂಗಳೂರಿನ ದೇವೇಗೌಡರ ನಿವಾಸದಲ್ಲಿ ಸುಮಾರು ಅರ್ಧ ಘಂಟೆಗಳ ಕಾಲ ಚರ್ಚಿಸಿದ ವಿಶ್ವನಾಥ್, ಪಕ್ಷ ಸೇರ್ಪಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ವಿಚಾರವೂ ಚರ್ಚೆಯಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಬಗ್ಗೆ ಯಾವುದೇ ಖಚಿತ ಭರವಸೆ ನೀಡದ ದೇವೇಗೌಡರು, ಕೂಡಲೇ ಪಕ್ಷ ಸೇರಿ ಸಂಘಟನೆಗೆ ನೆರವಾಗುವಂತೆ ಸಲಹೆ ನೀಡಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
