ನಾಮಕರಣಕ್ಕೆ ದೇಶದ ವಿವಿಧ ರಾಜಮನೆತನಗಳನ್ನು ಕರೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ

ಮೈಸೂರು(ಜ.04): ಮುಂದಿನ ಎರಡ್ಮೂರು ತಿಂಗಳೊಳಗೆ ಮಗುವಿಗೆ ಸೂಕ್ತ ಹೆಸರಿಡಲಾಗುವುದು. ಅದಕ್ಕಾಗಿ ಈಗ ಹುಡುಕಾಟ ನಡೆಸಲಾಗುತ್ತಿದೆ ಎಂದು ಮೈಸೂರು ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಕರಣ ಕಾರ್ಯಕ್ರಮವನ್ನು ಮೈಸೂರು ಅರಮನೆ ಅಥವಾ ಬೇರೆಡೆ ನಡೆಸಬೇಕೇ ಎಂಬ ಬಗ್ಗೆ ಕುಟುಂಬದೊಂದಿಗೆ ಕುಳಿತು ಚರ್ಚಿಸಿ ನಂತರ ಹೇಳುತ್ತೇವೆ. ನಾಮಕರಣಕ್ಕೆ ದೇಶದ ವಿವಿಧ ರಾಜಮನೆತನಗಳನ್ನು ಕರೆಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ ಎಂದರು. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಯಾವುದೇ ಪಕ್ಷಗಳು ರಾಜಕೀಯ ಬನ್ನಿ ಎಂದು ಆಹ್ವಾನ ನೀಡಿಲ್ಲ. ಹಾಗಂತ ರಾಜಕೀಯಕ್ಕೆ ಬರುವುದೇ ಇಲ್ಲ ಎಂದಂತಲ್ಲ. ಯಾವುದೇ ವಿಚಾರವನ್ನು ಊಹಿಸಿ ಹೇಳಲು ಸಾಧ್ಯವಿಲ್ಲ. ನನ್ನ ರಾಜಕೀಯ ಪ್ರವೇಶದಿಂದ ಜನರಿಗೆ ಒಳಿತಾಗಲಿದೆ ಎಂದರೆ ಮಾತ್ರ ಪ್ರವೇಶಿಸುತ್ತೇನೆ ಎಂದರು.