ರಾಜ್ಯದ ಈ ಐವರು ಪ್ರಭಾವಿ ಸಚಿವರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.
ಬೆಂಗಳೂರು(ಆ.02): ಇಡೀ ದೇಶದ ರಾಜಕೀಯ ಕ್ಷೇತ್ರವೇ ಶಾಕ್ ಆಗುವ ರೀತಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಸ್ವತ್ತುಗಳು ಹಾಗೂ ಸಂಬಂಧಿಕರ ಮೇಲೆ ಐಟಿ ಇಂದು ಬೆಳಗಿನಿಂದ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ಹಲವು ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇನ್ನು 2 ದಿನ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇಷ್ಟು ಮಾತ್ರವಲ್ಲದೆ ರಾಜ್ಯದ ಈ ಐವರು ಪ್ರಭಾವಿ ಸಚಿವರ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ.
ಐಟಿ ಹಿಟ್ ಲಿಸ್ಟ್ನಲ್ಲಿರುವ ಸಚಿವರು
------------------------------------------
ಎಂ.ಬಿ. ಪಾಟೀಲ್, ಜಲಸಂಪನ್ಮೂಲ ಸಚಿವ
ಕೆ.ಜೆ. ಜಾರ್ಜ್, ಬೆಂಗಳೂರು ನಗರಾಭಿವೃದ್ಧಿ ಸಚಿವ
ಎಚ್.ಸಿ. ಮಹಾದೇವಪ್ಪ- ಲೋಕೋಪಯೋಗಿ ಸಚಿವ
ರೋಷನ್ಬೇಗ್- ಮೂಲಭೂತ ಸೌಲಭ್ಯ
ರಾಮಲಿಂಗಾರೆಡ್ಡಿ- ಸಾರಿಗೆ ಸಚಿವ
