ನವದೆಹಲಿ[ಅ.02]: ‘ನಾನು ಎಲ್ಲವನ್ನು ಗೆದ್ದು ಬರುತ್ತೇನೆ, ಬಿಜೆಪಿ ನಾಯಕರ ಬಂಡವಾಳ ಬಿಚ್ಚಿ ಇಡುತ್ತೇನೆ, ನಾನೊಬ್ಬನೇ ತಪ್ಪು ಮಾಡಿದ್ದಾ? ಎಲ್ಲದಕ್ಕೂ ಉತ್ತರ ಕೊಡುತ್ತೇನೆ’ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಎಂದು ಗುಡುಗಿದ್ದಾರೆ.

ಡಿಕೆ ಶಿವಕುಮಾರ್‌ಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನ ವಿಸ್ತರಣೆ

ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ವಿಚಾರಣೆ ಮುಗಿದ ಬಳಿಕ ಅವರ ಅಪೇಕ್ಷೆಯಂತೆ ನ್ಯಾಯಾಲಯ ಅವರ ಸಂಬಂಧಿಕರೊಡನೆ 10 ನಿಮಿಷ ಮಾತನಾಡಲು ಅನುಮತಿ ನೀಡಿತ್ತು. ಈ ವೇಳೆ ಕೋರ್ಟ್‌ಹಾಲ…ನೊಳಗೆ ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಸಂಬಂಧಿಗಳು ಮತ್ತು ಅಭಿಮಾನಿಗಳು ಬಂದು ಭೇಟಿಯಾದರು. ಡಿಕೆಶಿ ಕೆಲವರ ಕೈ ಕುಲಕಿದರೆ, ಇನ್ನೂ ಕೆಲವರ ಬೆನ್ನಿನ ಮೇಲೆ ಕೈ ಹಾಕಿದರು ಸುದ್ದಿಗಾರರೆದುರು ಗುಡುಗಿದರು.

ಡಿಕೆ ಶಿವಕುಮಾರ್‌ಗೆ ಮತ್ತೆ ಆಘಾತ: ನ್ಯಾಯಾಂಗ ಬಂಧನ ವಿಸ್ತರಣೆ

ಬಂದಿದ್ದ ಅಭಿಮಾನಿ ಮತ್ತು ಸಂಬಂಧಿಗಳ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೂ ಮಾತನಾಡಿದ ಅವರು, ಈ ಮೇಲಿನ ಮಾತುಗಳನ್ನು ಹೇಳಿದರು. ಹಾಲ್ಮಲ್‌ವರಿದು ‘ನನ್ನ ಆಸ್ತಿಯ ಮೌಲ್ಯದಲ್ಲಿ ಸಹಜ ಏರಿಕೆ ಆಗಿದೆ. ಅದನ್ನೇ ಅಪರಾಧ ಎಂಬಂತೆ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಂತೆ ಪೊಲೀಸರು ಅವರನ್ನು ಕೋರ್ಟ್‌  ನಿಂದ ಕರೆದೊಯ್ದರು.

ಬಂಡೆ ಜಗ್ಗಲ್ಲ, ಬಗ್ಗಲ್ಲ, ಅಲ್ಲಾಡೊಲ್ಲ

ಡಿ.ಕೆ.ಶಿವಕುಮಾರ್‌ ಆತ್ಮಸ್ಥೈರ್ಯದಿಂದ ಇದ್ದಾರೆ. ಅವರ ಬೆಂಬಲಿಗರಿಗೆ ಧೈರ್ಯ ತುಂಬಿದ್ದಾರೆ. ಅವರ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ಅವರ ಮೇಲಿರುವ ಎಲ್ಲ ಆರೋಪಗಳಿಂದ ಮುಕ್ತಿ ಸಿಗಲಿದೆ. ನ್ಯಾಯಾಲಯದಲ್ಲಿ ಜಯ ಸಿಗಲಿದೆ. ಬಂಡೆ ಜಗ್ಗಲ್ಲ, ಬಗ್ಗಲ್ಲ, ಬಿಸಿಲು ಮಳೆ ಬಂದರೂ ಅಲ್ಲಾಡುವುದಿಲ್ಲ.

-ಡಿ.ಕೆ.ಸುರೇಶ್‌, ಸಂಸದರು

ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: