ನವದೆಹಲಿ: ಕರ್ನಾಟಕದ ರಂಗಭೂಮಿ ಕಲಾವಿದ, ಚಿತ್ರ ಕಥೆಗಾರ, ನಟ, ಸಾಹಿತಿ ಹಾಗೂ ಜ್ಞಾನಪೀಠ ಪುರಸ್ಕೃತ ಗಿರೀಶ್‌ ಕಾರ್ನಾಡ್‌ ಅವರ ಅಗಲಿಕೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. 

ಕಾರ್ನಾಡ್‌ ಅವರು ತಮ್ಮ ಜೀವನ ಪರ್ಯಂತ ಸಾಮಾಜಿಕ ನ್ಯಾಯ, ಜಾತ್ಯತೀತ ನಿಲುವುಗಳು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಎಂದು ಸೋನಿಯಾ ಕೊಂಡಾಡಿದ್ದಾರೆ. 

ಈ ಬಗ್ಗೆ ಕಾರ್ನಾಡ್‌ ಅವರ ಪತ್ನಿ ಸರಸ್ವತಿ ಅವರಿಗೆ ಪತ್ರ ಬರೆದಿರುವ ಸೋನಿಯಾ ಅವರು, ‘ಕಾರ್ನಾಡ್‌ ಅವರ ಅಗಲಿಕೆಯ ಶೂನ್ಯವನ್ನು ಯಾರಿಂದಲೂ ತುಂಬಲು ಅಸಾಧ್ಯ. ಕಾರ್ನಾಡ್‌ ಅವರು ಬೆಲೆಕಟ್ಟಲಾಗದ ಪರಂಪರೆಯನ್ನು ಬಿಟ್ಟು ಹೋಗಿದ್ದು, ಸಾಹಿತ್ಯಕ್ಕೆ ಅವರು ನೀಡಿದ ಮಹಾನ್‌ ಕೊಡುಗೆಯು ಅವರನ್ನು ಸದಾ ಜೀವಂತವಾಗಿರಿಸುತ್ತದೆ’ ಎಂದು ತಿಳಿಸಿದರು.