ಅಪ್ಪನ ಸಾವಿನಿಂದ ನೊಂದ ಮಗ ಆತ್ಮಹತ್ಯೆಗೆ ಯತ್ನ

Son commits Suicide after Father Dies
Highlights

  • ಸುಮಾರು 7 ಲಕ್ಷ ರೂ. ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ತಂದೆ
  • ಮಳೆಬೆಳೆ ಇಲ್ಲದೆ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ

ಚಿತ್ರದುರ್ಗ[ಜೂ.20]: ಅಪ್ಪನ ಆತ್ಮಹತ್ಯೆಯಿಂದ ನೊಂದ ಮಗ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಕುದಾಪುರ ಲಂಬಾಣಿಹಟ್ಟಿಯಲ್ಲಿ‌ ನಡೆದಿದೆ.

ವೆಂಕಟೇಶ್ (22) ಆತ್ಮಹತ್ಯೆಗೆ ಯತ್ನಿಸಿದ ಯುವಕ.  ಈತನನ್ನು ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.  ಸಾಲಬಾಧೆ ಹಿನ್ನಲೆಯಲ್ಲಿ ನಿನ್ನೆ ರೈತ ರಾಮನಾಯ್ಕ (60)ಆತ್ಮಹತ್ಯೆಗೆ ಶರಣಾಗಿದ್ದರು.

ನಿನ್ನೆ ಜಮೀನಿನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಸುಮಾರು 7 ಲಕ್ಷ ಕೈ ಸಾಲ ಮಾಡಿ ಕೊಳವೆ ಬಾವಿ ಕೊರೆಸಿದ್ದು  ವಿಫಲವಾಗಿತ್ತು. ಮಳೆ- ಬೆಳೆ ಇಲ್ಲದೆ ಸಾಲ ತೀರಿಸುವ ಚಿಂತೆಗೀಡಾಗಿದ್ದರು ರಾಮನಾಯ್ಕ್. ನಾಯಕನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loader