ನವದೆಹಲಿ (ಅ.13): ಸರ್ಜಿಕಲ್ ದಾಳಿಯ ಬಗ್ಗೆ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ರಕ್ಷಣಾ ಸಚಿವ ಮನೋಹರ್ ಪಾರಿಕರ್ ರನ್ನು ಯಾರಾದರೂ ನಿಯಂತ್ರಿಸಬೇಕೆಂದು ಮಾಜಿ ರಕ್ಷಣಾ ಸಚಿವ, ಕಾಂಗ್ರೆಸ್ ನಾಯಕ ಎ.ಕೆ ಆ್ಯಂಟನಿ ತಿರುಗೇಟು ನೀಡಿದ್ದಾರೆ.

ಕಳೆದ 30 ವರ್ಷಗಳಲ್ಲಿ ಸರ್ಜಿಕಲ್ ದಾಳಿ ನಡೆದಿಲ್ಲ. ಇದೇ ಮೊದಲ ಬಾರಿ ದಾಳಿ ನಡೆದಿರುವುದು ಎನ್ನುವ ಪಾರಿಕರ್ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ಮೂಲಕ ಭಾರತೀಯ ಸೇನೆಯನ್ನು, ಭಾರತವನ್ನು ಅವಮಾನಿಸುತ್ತಿದ್ದಾರೆ. ಅವರನ್ನು ಯಾರಾದರೂ ನಿಯಂತ್ರಿಸಬೇಕು ಎಂದು ಆ್ಯಂಟನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.