ಇದೀಗ ಎಲ್ಲೆಡೆ ವಿವಾಹ ಕಾರ್ಯಕ್ರಮಗಳ ಸಮಯ. ಮುಂದಿನ ಒಂದು ವಾರದ ಅವಧಿಯಲ್ಲಿ ಆಂಧ್ರದಲ್ಲಿ 1.2 ಲಕ್ಷಕ್ಕೂ ಹೆಚ್ಚು ಮದುವೆ ನಿಗದಿಯಾಗಿವೆ. ಈ ಪೈಕಿ ಹಲವು ಗಣ್ಯರದ್ದು, ರಾಜಕೀಯ ನಾಯಕ ಬಂಧುಗಳದ್ದು ಸೇರಿವೆ. ಇದನ್ನು ತಪ್ಪಿಸಲಾಗದ 100ಕ್ಕೂ ಶಾಸಕರು ನ.23 ಮತ್ತು 24ರಂದು ರಜೆ ಬೇಕೆಂದು ಕೋರಿದ್ದಾರೆ.
ಹೈದರಾಬಾದ್ (ನ.25): ಸಾರ್ವಜನಿಕರ ಸಮಸ್ಯೆಗಳ ಆಲಿಕೆ ಮತ್ತು ವಿದೇಯಕಗಳ ಮಂಡನೆಗಾಗಿ ಲೋಕಸಭೆ, ರಾಜ್ಯಸಭೆ, ರಾಜ್ಯಗಳಲ್ಲಿ ವಿಧಾನಸಭೆ ಕಲಾಪ ನಡೆಯುತ್ತವೆ. ಆದರೆ, ಆಂಧ್ರಪ್ರದೇಶದ 100ಕ್ಕೂ ಹೆಚ್ಚು ಶಾಸಕರು ಒಮ್ಮೆಗೆ ಸಾಮೂಹಿಕ ರಜೆ ಕೇಳಿದ್ದಾರೆ. ಹಾಗಾಗಿ, 2 ದಿನದ ಕಲಾಪಕ್ಕೇ ಕಾಲ ರಜೆ ಘೋಷಿಸಲಾಗಿದೆ.
ಇದೀಗ ಎಲ್ಲೆಡೆ ವಿವಾಹ ಕಾರ್ಯಕ್ರಮಗಳ ಸಮಯ. ಮುಂದಿನ ಒಂದು ವಾರದ ಅವಧಿಯಲ್ಲಿ ಆಂಧ್ರದಲ್ಲಿ 1.2 ಲಕ್ಷಕ್ಕೂ ಹೆಚ್ಚು ಮದುವೆ ನಿಗದಿಯಾಗಿವೆ. ಈ ಪೈಕಿ ಹಲವು ಗಣ್ಯರದ್ದು, ರಾಜಕೀಯ ನಾಯಕ ಬಂಧುಗಳದ್ದು ಸೇರಿವೆ. ಇದನ್ನು ತಪ್ಪಿಸಲಾಗದ 100ಕ್ಕೂ ಶಾಸಕರು ನ.23 ಮತ್ತು 24ರಂದು ರಜೆ ಬೇಕೆಂದು ಕೋರಿದ್ದಾರೆ. ಮುಂದಿನ 2 ದಿನ ಶನಿವಾರ ಮತ್ತು ಭಾನುವಾರವಾದ ಕಾರಣ ಒಟ್ಟಿಗೆ 4 ದಿನ ರಜೆ ಸಿಗುತ್ತದೆ.
ಬೇರೆ ದಾರಿ ಕಾಣದ ಸ್ಪೀಕರ್ ರಜೆ ನೀಡುವ ಬದಲು 2 ದಿನ ಕಲಾಪವನ್ನೇ ಮುಂದೂಡಿದ್ದಾರೆ. ಜೊತೆಗೆ ಅಧಿವೇಶನದ ಅವಧಿಯನ್ನು 2 ದಿನ ವಿಸ್ತರಿಸಲಾಗಿದೆ. ಹೀಗಾಗಿ ಎಲ್ಲ ಶಾಸಕರಿಗೂ ರಜೆ ಸಿಕ್ಕಿದ್ದೂ, ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಮರಳಿದ್ದಾರೆ.
