Asianet Suvarna News Asianet Suvarna News

ಸಿಯಾಚಿನ್‌ ಯೋಧರಿಗಿನ್ನು ದೇಶೀಯ ಉಪಕರಣ

ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರು ಬಳಸುವ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವ ಯೋಜನೆಗೆ ಭಾರತೀಯ ಸೇನೆ ಒಪ್ಪಿಗೆ ನೀಡಿದೆ. 

Soldiers Serving in Siachen Soon Get India Made Equipments
Author
Bengaluru, First Published Aug 13, 2018, 1:48 PM IST

ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಕಾರ್ಯನಿರ್ವಹಿಸುವ ಯೋಧರು ಬಳಸುವ ಉಪಕರಣಗಳನ್ನು ದೇಶೀಯವಾಗಿ ಉತ್ಪಾದಿಸುವ ಯೋಜನೆಗೆ ಭಾರತೀಯ ಸೇನೆ ಬಹುತೇಕ ಅಂತಿಮ ಮುದ್ರೆ ಒತ್ತಿದೆ. ಇದು ಸಾಧ್ಯವಾದಲ್ಲಿ ಭಾರತ ಸರ್ಕಾರಕ್ಕೆ ವಾರ್ಷಿಕ ಅಂದಾಜು 300 ಕೋಟಿ ರು. ಉಳಿತಾಯವಾಗಲಿದೆ.

ಸಮುದ್ರ ಮಟ್ಟದಿಂದ 10000- 20000 ಅಡಿ ಎತ್ತರದಲ್ಲಿರುವ ಸಿಯಾಚಿನ್‌ನಲ್ಲಿ ಕೆಲವು ಸಂದರ್ಭಗಳಲ್ಲಿ ಮೈನಸ್‌ 60 ಡಿ.ಸೆ.ವರೆಗೂ ತಾಪಮಾನ ಕುಗ್ಗಿರುತ್ತದೆ. ಇಂಥ ವಾತಾವರಣದಲ್ಲಿ ಕೆಲಸ ಮಾಡಲು ಯೋಧರಿಗೆ ಹೆಚ್ಚಿನ ರಕ್ಷಣೆ ಅಗತ್ಯವಿರುತ್ತದೆ. ಹೀಗಾಗಿ ಇದಕ್ಕೆ ಬೇಕಾದ ವಸ್ತ್ರಗಳು, ಹಲವು ಉಪಕರಣಗಳನ್ನು ಇದುವರೆಗೆ ಅಮೆರಿಕ, ಆಸ್ಪ್ರೇಲಿಯಾ, ಕೆನಡಾ, ಸ್ವಿಜರ್ಲೆಂಡ್‌ ಸೇರಿದಂತೆ ವಿದೇಶಗಳಿಂದ ತರಿಸಿಕೊಳ್ಳಬೇಕಿತ್ತು. ಇದಕ್ಕೆ ವಾರ್ಷಿಕ 800 ಕೋಟಿ ರು.ವೆಚ್ಚಾಗುತ್ತಿತ್ತು.

ಇದೀಗ ಈ ಉಪಕರಣಗಳನ್ನು ದೇಶೀಯವಾಗಿಯೇ, ಖಾಸಗಿ ಸಹಭಾಗಿತ್ವದೊಂದಿಗೆ ಉತ್ಪಾದಿಸಲು ಭಾರತೀಯ ಸೇನೆ ನಿರ್ಧರಿಸಿದೆ. ಕಳೆದ 10 ವರ್ಷಗಳಲ್ಲಿ ಸಿಯಾಚಿನ್‌ನಲ್ಲಿ ಕಾರ್ಯನಿರ್ವಸುತ್ತಿದ್ದ 163 ಭಾರತೀಯ ಯೋಧರು ವಿವಿಧ ಕಾರಣಗಳಿಂದಾಗಿ ಸಾವನ್ನಪ್ಪಿದ್ದಾರೆ. ಹೀಗಾಗಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಸೇನೆ, ದೇಶೀಯವಾಗಿಯೇ ಯೋಧರಿಗೆ ಬೇಕಾದ ಥರ್ಮಲ್‌ ಇನ್‌ಸೋಲ್ಸ್‌, ಮಂಜಿನಲ್ಲಿ ಬಳಸುವ ಕನ್ನಡಕ, ವಸ್ತ್ರಗಳು, ಹಿಮಪಾತ ಸಂದರ್ಭದಲ್ಲಿ ಹಿಮದೊಳಗೆ ಸಿಕ್ಕಿಬಿದ್ದ ಯೋಧರ ಪತ್ತೆ ಬಳಸುವ ಉಪಕರಣ, ನಿದ್ದೆ ಮಾಡಲು ಬಳಸುವ ಬ್ಯಾಗ್‌ಗಳನ್ನು ದೇಶೀಯವಾಗಿಯೇ ಉತ್ಪಾದಿಸಲು ನಿರ್ಧರಿಸಿದೆ.

Follow Us:
Download App:
  • android
  • ios