ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಬೆಳಗಾವಿ ಮೂಲದ ವೀರ ಯೋಧ ಬಸಪ್ಪ ಹಣವಂತಪ್ಪ ಹುತಾತ್ಮರಾಗಿದ್ದರು. ಇಂದು ಯೋಧನ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ತರಲಾಗಿದೆ.

ಬೆಳಗಾವಿ(ಎ.05): ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಬೆಳಗಾವಿ ಮೂಲದ ವೀರ ಯೋಧ ಬಸಪ್ಪ ಹಣವಂತಪ್ಪ ಹುತಾತ್ಮರಾಗಿದ್ದರು. ಇಂದು ಯೋಧನ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ತರಲಾಗಿದೆ.

ವೀರ ಯೋಧ ಬಸಪ್ಪ ಹಣವಂತಪ್ಪ ಅವರ ಸ್ವಗ್ರಾಮವಾದ ಕಿತ್ತೂರು ತಾಲೂಕಿನ ಬೈಲೂರು ಗ್ರಾಮದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಸ್ವಗ್ರಾಮದಲ್ಲಿ ಯೋಧನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಜಮ್ಮು - ಕಾಶ್ಮೀರದಲ್ಲಿ ಸಿಆರ್‌ಪಿಎಫ್ ನಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದ ಯೋಧ ಬಸಪ್ಪ ಹಣವಂತಪ್ಪ ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆಗೆ ಜಿಲ್ಲಾಡಳಿತ ಸಿದ್ಧತೆ ಮಾಡಿದೆ.