ಮುಂಬೈ[ಮೇ.29]: ಅಮೇಥಿಯಿಂದ ನೂತನ ಸಂಸದೆಯಾಗಿ ಆಯ್ಕೆಯಾಗಿರುವ ಸ್ಮೃತಿ ಇರಾನಿ ತಮ್ಮ ಮನೆಯಿಂದ 14 ಕಿ. ಮೀ ದೂರಲ್ಲಿರುವ ಮುಂಬೈನ ಸಿದ್ಧಿ ವಿನಾಯಕ ಮಂದಿರಕ್ಕೆ ಕಾಲ್ನಡಿಗೆಯಲ್ಲೇ ತೆರಳಿ ಹರಕೆ ತೀರಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಮೃತಿ ಇರಾನಿಯೊಂದಿಗೆ ಅವರ ಗೆಳತಿ ಹಾಗೂ ಖ್ಯಾತ ಬಾಲಿವುಡ್ ನಿರ್ದೆಶಕಿ ಏಕ್ತಾ ಕಪೂರ್ ಕೂಡಾ ಇದ್ದರು. 

ಸಿದ್ಧಿ ವಿನಾಯಕ ಮಂದಿರಕ್ಕೆ ಕಾಲ್ನಡಿಗೆಯಲ್ಲಿ ತಲುಪಿದ ಬಳಿಕ ಸ್ಮೃತಿ ಇರಾನಿ ಜೊತೆ ತೆಗೆದ ಸೆಲ್ಫೀಯೊಂದನ್ನು ಶೇರ್ ಮಾಡಿಕೊಂಡಿರುವ ಏಕ್ತಾ ಕಪೂರ್ '14 ಕಿ. ಮೀಟರ್ ನಡೆದು ಸಿದ್ಧಿ ವಿನಾಯಕನ ಬಳಿ ತಲುಪಿದ ಬಳಿಕದ ಗ್ಲೋ' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ 'ಇದು ಭಗವಂತನ ಇಚ್ಛೆ, ಭಗವಂತ ಕರುಣಾಮಯಿ' ಎಂದಿದ್ದಾರೆ.

 
 
 
 
 
 
 
 
 
 
 
 
 

14 kms to SIDDHI VINAYAK ke baaad ka glow 😂

A post shared by Erk❤️rek (@ektaravikapoor) on May 27, 2019 at 11:08pm PDT

ಏಪ್ರಿಲ್ 23ರಂದು ಹೊರದಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಮೇಥಿಯಿಂದ ಕಣಕ್ಕಿಳಿದಿದ್ದ ಸ್ಮೃತಿ ಇರಾನಿ, ತನ್ನ ಎದುರಾಳಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಸೋಲಿಸಿದ್ದರು.