Asianet Suvarna News Asianet Suvarna News

ಸ್ಮೃತಿ ಸೀರೆ, ರಾಹುಲ್ ಬಾಳೆಗಿಡ ರಾಜಕೀಯ!

ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೆಲ ದಿನಗಳ ಹಿಂದಷ್ಟೇ ಅಮೇಠಿ ಕ್ಷೇತ್ರದ ಮತದಾರರಿಗೆ 10000 ಸೀರೆ ಕಳುಹಿಸಿಕೊಟ್ಟಿದ್ದರು. ಇದೀಗ ಈ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ತಮ್ಮ ಕ್ಷೇತ್ರಕ್ಕೆ ಇಸ್ರೇಲಿನಿಂದ 10000 ಬಾಳೆಗಿಡಗಳನ್ನು ಕಳುಹಿಸಿಕೊಟ್ಟು ಸುದ್ದಿಯಾಗಿದ್ದಾರೆ.

Smriti Irani pans Rahul Gandhi for sending Israeli bananas to amethi
Author
Amethi, First Published Nov 20, 2018, 10:40 AM IST

ಲಖನೌ[ನ.20]: ಅಮೇಠಿ ಕ್ಷೇತ್ರವನ್ನು ಕೈವಶಮಾಡಿಕೊಳ್ಳಲು ಯತ್ನಿಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೆಲ ದಿನಗಳ ಹಿಂದಷ್ಟೇ ಕ್ಷೇತ್ರದ ಮತದಾರರಿಗೆ 10000 ಸೀರೆ ಕಳುಹಿಸಿಕೊಟ್ಟಿದ್ದರು. ಇದೀಗ ಈ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ತಮ್ಮ ಕ್ಷೇತ್ರಕ್ಕೆ ಇಸ್ರೇಲಿನಿಂದ 10000 ಬಾಳೆಗಿಡಗಳನ್ನು ಕಳುಹಿಸಿಕೊಟ್ಟು ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ರಫೆಲ್ ತನಿಖೆ ನಡೆದರೆ ಮೋದಿ ಖತಂ: ರಾಹುಲ್!

ಕಳೆದ ಬಾರಿ ಕ್ಷೇತ್ರಕ್ಕೆ ರಾಹುಲ್‌ ಭೇಟಿ ಕೊಟ್ಟಾಗ, ಹೆಚ್ಚು ಇಳುವರಿ ನೀಡುವ ಬಾಳೆಗಿಡ ತರಿಸಿಕೊಡುವಂತೆ ಕೆಲ ರೈತರು ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ರಾಹುಲ್‌, ಇಸ್ರೇಲ್‌ನಿಂದ ಹೆಚ್ಚು ಇಳುವರಿ ನೀಡುವ ಜಿ 9 ಮಾದರಿಯ ಬಾಳೆ ಗಿಡಗಳನ್ನು ತರಿಸಿ ಮತದಾರರಿಗೆ ಕಳುಹಿಸಿಕೊಟ್ಟಿದ್ದಾರೆ

Follow Us:
Download App:
  • android
  • ios