ಚಂಡೀಗಡ[ಮೇ.19]: ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸಿಧು ಪಂಜಾಬ್ ಸಿಎಂ ಆಗುವ ಕನಸು ಕಂಡಿದ್ದಾರೆ. ಈ ಮೂಲಕ ತನ್ನ ಸ್ಥಾನಕ್ಕೇರಲು ಯತ್ನಿಸುತ್ತಿದ್ದಾರೆಂದು ಅಮರಿಂದರ್ ಸಿಂಗ್ ಆರೋಪಿಸಿದ್ದಾರೆ.

ಸಿಧು ವಿರುದ್ಧ ಗಂಭೀರ ಆರೋಪ ಮಾಡಿರುವ ಅಮರಿಂದರ್ ಸಿಂಗ್ 'ಸಿಧು ಮೇಲೆ ನನಗೆ ಯಾವುದೇ ರೀತಿಯ ವೈಯುಕ್ತಿಕ ದ್ವೇಷ ಇಲ್ಲ. ಅವರ ವಿರುದ್ಧ ವಾಗ್ದಾಳಿಯೂ ನಡೆಸುತ್ತಿಲ್ಲ. ಅವರಲ್ಲಿ ಆಕಾಂಕ್ಷೆ ಇದ್ದರೆ ಒಳ್ಳೆಯದು, ಜನರಲ್ಲಿ ಮಹತ್ವಾಕಾಂಕ್ಷೆ ಇರುತ್ತದೆ. ಬಾಲ್ಯದಿಂದಲೇ ನಾನವರನ್ನು ಕಂಡಿದ್ದೇನೆ. ನಾನು ಅವರ ಅಭಿಪ್ರಾಯವನ್ನು ಖಂಡಿಸುತ್ತಿಲ್ಲ. ಆದರೀಗ ಅವರು ಪಂಜಾಬ್ ಸಿಎಂ ಆಗಲು ಬಯಸುತ್ತಿರುವಂತಿದೆ ಹಾಗೂ ನನ್ನ ಸ್ಥಾನ ಪಡೆದುಕೊಳ್ಳಲು ಯತ್ನಿಸುತ್ತಿರುವಂತಿದೆ' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ಸಿಧುಗೆ ಶಿಸ್ತು ಎಂಬುವುದು ಇಲ್ಲ. ಹೀಗಾಗಿ ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದೂ ಆಗ್ರಹಿಸಿದ್ದಾರೆ. 

ಈ ಹಿಂದೆ ಸಿಧು ಜೊತೆ ನಡೆದ ವಾಗ್ವಾದದ ವೇಳೆ ಒಂದು ವೇಳೆ ಮಾತನಾಡಿದ್ದ ಅಮರಿಂದರ್ ಸಿಂಗ್ ಪಂಜಾಬ್ ನಲ್ಲಿ ಕಾಂಗ್ರೆಸ್ ಸೋಲನುಭವಿಸಿದರೆ,  ತಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನಿಡುವುದಾಗಿ ಘೋಷಿಸಿದ್ದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.