ರೋಗಗ್ರಸ್ತ ಕಾರ್ಖಾನೆ ಖರೀದಿಸಿ ಲಾಭದತ್ತ ತಿರುಗಿಸಿದ್ದ ಸಿದ್ಧಾರ್ಥ

ಕಾಫಿ ಉದ್ಯಮ ಕ್ಷೇತ್ರದ ದೊರೆ ಸಿದ್ಧಾರ್ಥ ಅವರು ಆತ್ಮಹತ್ಯೆಗೆ ಶರಣಾಗಿ ಸಾವಿರಾರು ಕೋಟಿ ಸಾಮ್ರಾಜ್ಯ ಬಿಟ್ಟು ತೆರಳಿದ್ದಾರೆ. ಬೃಹತ್ ಸಾಮ್ರಜ್ಯ ಕಟ್ಟು ಹಿಂದೆ ಅನೇಕ ರೀತಿಯ ಪರಿಶ್ರಮವಿದೆ. ಅದರಲ್ಲೊಂದು ವಿಚಾರ ಇಲ್ಲಿದೆ. 

Siddhartha converted lost company into a profitable firm

ಬೆಂಗಳೂರು [ಜು.31]: ಕಾಫಿ ಸಾಮ್ರಾಜ್ಯದ ಒಡೆಯ ಸಿದ್ಧಾರ್ಥ ಅವರು ತಮ್ಮ ಬೃಹತ್ ಸಾಮ್ರಾಜ್ಯವನ್ನು ಬಿಟ್ಟು ತೆರಳಿದ್ದಾರೆ. ನೇತ್ರಾವತಿಯಲ್ಲಿ ತಮ್ಮ ಜೀವನ ಕೊನೆಗೊಳಿಸಿದ್ದಾರೆ. 

ಈ ಸಾವಿರಾರು ಕೋಟಿ ಒಡೆಯ ನಷ್ಟದಲ್ಲಿದ್ದ ಕಂಪನಿಯೊಂದನ್ನು ಭಾರೀ ಲಾಭದತ್ತ ಕೊಂಡೊಯ್ದಿದ್ದರು. ಸಣ್ಣ ಉದ್ಯಮಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸುವ ಬುದ್ದಿವಂತಿಕೆಯು ಇವರ ಬಳಿ ಇತ್ತು.  ಹಿಂದೆಲ್ಲಾ ಕಾಫಿ ಬೆಳೆಗಾರರು ತಾವು ಬೆಳೆದ ಬಹುತೇಕ ಉತ್ಪನ್ನವನ್ನು ಕಾಫಿ ಮಂಡಳಿಗೇ ಮಾರಬೇಕಿತ್ತು. 1993ರ ಉದಾರೀಕರಣದ ಫಲವಾಗಿ ಆ ನಿರ್ಬಂಧ ರದ್ದಾಯಿತು. 

ಕಣ್ಮರೆಯಾದ ಕಾಫಿವಾಲನಿಗೆ ಜಾಗತಿಕ ಮಾಧ್ಯಮ ಕೊಟ್ಟ ಬಿರುದು ಒಂದೋ, ಎರಡೋ...

ಅದರಿಂದ ಮೊದಲು ಪ್ರತಿಫಲ ಪಡೆದವರು ಸಿದ್ಧಾರ್ಥ. ತಡಮಾಡದೇ ಅಮಾಲ್ಗಮೇಟೆಡ್‌ ಬೀನ್‌ ಕಾಫಿ (ಎಬಿಸಿ) ಎಂಬ ಕಂಪನಿ ಹುಟ್ಟು ಹಾಕಿದರು. ಆ ಕಾಲಕ್ಕೆ ಕಂಪನಿಯ ವಾರ್ಷಿಕ ಆದಾಯ 6 ಕೋಟಿ ರು. ಇತ್ತು. ಹಾಸನದ ಕಾಫಿ ಕ್ಯೂರಿಂಗ್‌ ಘಟಕವೊಂದು ಭಾರಿ ನಷ್ಟದಲ್ಲಿತ್ತು.

'ಧಣಿ'ಯನ್ನು ಕೊನೆಯ ಬಾರಿ ನೋಡಲು ಸಾಲು ನಿಂತ ಕಾಫಿನಾಡಿನ ಜನ, ಚಿಕ್ಕಮಗಳೂರು ಬಂದ್!

 4 ಕೋಟಿ ರು.ಗೆ ಅದನ್ನು ಖರೀದಿಸಿದ ಸಿದ್ಧಾರ್ಥ ಅದನ್ನು ಲಾಭದ ಹಳಿಗೆ ತಂದರು. ಬಳಿಕ ದೇಶದ ಅತಿದೊಡ್ಡ ಕಾಫಿ ಕ್ಯೂರಿಂಗ್‌ ಕೇಂದ್ರವಾಗಿ ಪರಿವರ್ತಿಸಿದರು. ಸಿದ್ಧಾರ್ಥ ಅವರ ಬಳಿ ಈ 12000 ಎಕರೆಗಿಂತಲೂ ಅಧಿಕ ಕಾಫಿ ತೋಟವಿದೆ.

Latest Videos
Follow Us:
Download App:
  • android
  • ios