ಬೆಂಗಳೂರು[ಜು.16]: ಹೃದಯಾಘಾತದಿಂದ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ತನ್ನ ಓರ್ವ ಪುಟ್ಟ ಅಭಿಮಾನಿಯನ್ನೂ ಮಾತನಾಡಿಸಿದ್ದಾರೆ

ಗುರುವಾರ ವಿಶ್ವಾಸ ಮತ ಹಿನ್ನೆಲೆ ಸಿದ್ದರಾಮಯ್ಯ ನಡೆ ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ಕಾವೇರಿ ನಿವಾಸದಿಂದ ಹೊರಟ ಮಾಜಿ CM ಸಿದ್ದರಾಮಯ್ಯ ಆಸ್ಟರ್ ಆಸ್ಪತ್ರೆಗೆ ತೆರಳಿ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ಪುಟಾಣಿ ಫ್ಯಾನ್

ಇನ್ನು ಬಿ. ನಾಗೇಂದ್ರರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಲು ಬಂದಿದ್ದಾರೆಂಬ ವಿಚಾರ ತಿಳಿದ ಅವರ ವಿಶೇಷ ಅಭಿಮಾನಿಯೊಬ್ಬ ಅವರನ್ನು ಭೇಟಿಯಾಗಲು ಓಡೋಡಿ ಬಂದಿದ್ದಾನೆ. ಹೌದು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ತ್ರಿಷಾರ್‌ಗೆ ಸಿದ್ದರಾಮಯ್ಯ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ವಿಚಾರ ತಿಳಿಯುತ್ತಿದ್ದಂತೆ ಶಾಸಕ ಬಿ. ನಾಗೇಂದ್ರ ಕೊಠಡಿಗೆ ಓಡೋಡಿ ಬಂದ ಪುಟಾಣಿ ಅಭಿಮಾನಿ ಸಿದ್ದರಾಮಯ್ಯ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾನೆ. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕರ ಬಿ. ನಾಗೇಂದ್ರರನ್ನು ಭೇಟಿಯಾದ ಬಳಿಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ 'ನಾಗೇಂದ್ರ ಚೇತರಿಸಿಕೊಳ್ಳುತ್ತಿದ್ದಾರೆ' ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಎಸ್ಐಟಿ ದುರ್ಬಳಕೆ ಎಂದು ಬಿಜೆಪಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ 'ಮೊದಲು ಅವರು ಕುದುರೆ ವ್ಯಾಪಾರ ನಿಲ್ಲಿಸಲಿ. ಇಂತಹ ಕೆಟ್ಟ ಪರಿಸ್ಥಿಗೆ ಬಿಜೆಪಿ ಬಿಜೆಪಿ ಕಾರಣ' ಎಂದಿದ್ದಾರೆ. ಬಳಿಕ ಮಾಜಿ ಸಿಎಂ ಬಳಿಕ ತಾಜ್ ವಿವಾಂತ್ ಹೋಟೆಲ್ ಕಡೆ ಹೆಜ್ಜೆ ಹಾಕಿದ್ದಾರೆ.

ಕಾಂಗ್ರೆಸ್ ಶಾಸಕ ನಾಗೇಂದ್ರಗೆ ಹೃದಯಾಘಾತ