ಬೆಂಗಳೂರು[ಆ.31]: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲು ಜಾರದಂತೆ ಎಚ್ಚರ ವಹಿಸಬೇಕು ಎಂದು ಹೇಳಿಕೆ ನೀಡಿದ್ದ ಸಚಿವ ಸಿ.ಟಿ. ರವಿ ಅವರಿಗೆ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ‘ನೀವು ಇನ್ನೂ ಯುವಕರು. ಹೆಚ್ಚು ವೇಗವಾಗಿ ಹೋಗಬೇಡಿ. ಅಪಘಾತ ಆದರೆ ಎಲ್ಲ ಸಂದರ್ಭದಲ್ಲೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಬುಧವಾರ ಸಿ.ಟಿ. ರವಿ ಅವರು, ಸಿದ್ದರಾಮಯ್ಯ ಕಾಲೆಳೆಯಲು ಅವರ ಪಕ್ಷದವರೇ ಕಾಯುತ್ತಿದ್ದಾರೆ. ಸಿದ್ದರಾಮಯ್ಯ ಕಾಲು ಜಾರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದ್ದರು.

ಕನ್ನಡಿಗರನ್ನು ಕೆರಳಿಸುವುದು ಸರಿಯಲ್ಲ: ‘ನಾಡಧ್ವಜ’ ಹೇಳಿಕೆಗೆ ಸಿದ್ದರಾಮಯ್ಯ ಕಿಡಿ!

ಶುಕ್ರವಾರ ಇದಕ್ಕೆ ತಿರುಗೇಟು ನೀಡಿ ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ‘ನಾನು ಕಾಲು ಜಾರದ ಹಾಗೆಯೇ ಎಚ್ಚರದಿಂದ 4 ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನೀವು ಇನ್ನೂ ಯುವಕರು ಹೆಚ್ಚು ಸ್ಪೀಡಾಗಿ ಹೋಗಬೇಡಿ, ಜೋಪಾನ. ಅಪಘಾತ ಮಾಡಿಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚೆಗಷ್ಟೇ ತುಮಕೂರಿನ ಕುಣಿಗಲ್‌ ಬಳಿ ಸಿ.ಟಿ. ರವಿ ಕಾರು ಡಿಕ್ಕಿ ಹೊಡೆದು ಇಬ್ಬರು ವ್ಯಕ್ತಿಗಳು ಮರಣ ಹೊಂದಿದ್ದರು. ಇದನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ಸಿದ್ದರಾಮಯ್ಯ, ಅಪಘಾತ ಆದರೆ ಎಲ್ಲ ಸಂದರ್ಭದಲ್ಲೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ಕನ್ನಡ ಧ್ವಜ ಬೇಡ: ಸಿ. ಟಿ. ರವಿ