ಬೆಂಗಳೂರು, (ಮೇ.30): ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯರಾಜಕಾರಣ ರಂಗೇರಿದ್ದು, ಮೈತ್ರಿ ಸರ್ಕಾರ ತೂಗುಯ್ಯಾಲೆಯಲ್ಲಿ  ಸಿಲುಕಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಶತಾಯಗತಾಯವಾಗಿ ಅಸ್ಥಿರಗೊಳಿಸಲು ರಾಜ್ಯ ಬಿಜೆಪಿ ಶಕ್ತಿ ಮೀರಿ ಪ್ರಯತ್ನ ನಡೆಸಿದೆ. ಇದ್ರಿಂದ ಆತಂಕಗೊಂಡಿರುವ  ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ದಿಡೀರ್ ಸರಣಿ ಟ್ವೀಟ್‌ಗಳನ್ನು ಮಾಡಿರುವುದನ್ನು ಗಮನಿಸಿದರೆ ಸಿದ್ದರಾಮಯ್ಯ ಅವರು ಎಲ್ಲೋ ಒಂದು ಕಡೆ ಮೈತ್ರಿ ಸರ್ಕಾರ ಬಗ್ಗೆ ಆತಂಕದಲ್ಲಿದ್ದಾರೆ ಎನ್ನುವುದು ಕಂಡುಬರುತ್ತಿದೆ. ಹಾಗಾದ್ರೆ ಸಿದ್ದು ಮಾಡಿದ ಸರಣಿ ಟ್ವೀಟ್ ಈ ಕೆಳಗಿನಂತಿವೆ.