ಯಡಿಯೂರಪ್ಪಗಿಂತ ಸಿದ್ದರಾಮಯ್ಯ ಬುದ್ದಿವಂತ ನಾಯಕ : ಅನುಪಮಾ ಶೆಣೈ

First Published 12, Mar 2018, 11:19 AM IST
Siddaramaiah Clever Than BSY
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗಿಂತ ಬುದ್ಧಿವಂತ ರಾಜಕಾರಣಿ ಎಂದು ಮುಕ್ತವಾಗಿ ಬಣ್ಣಿಸುವ ಮೂಲಕ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಜನತೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗಿಂತ ಬುದ್ಧಿವಂತ ರಾಜಕಾರಣಿ ಎಂದು ಮುಕ್ತವಾಗಿ ಬಣ್ಣಿಸುವ ಮೂಲಕ ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ಜನತೆಯಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಭಾನುವಾರ ‘ಕನ್ನಡಪ್ರಭ’ ಜತೆ ಮಾತನಾಡಿದ ಅವರು, ಬಹಳಷ್ಟು ಬಜೆಟ್‌ಗಳನ್ನು ಮಂಡಿಸಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರಿಗಿದೆ. ಯಾರು ಏನೇ ಹೇಳಲಿ ರಾಜ್ಯ ಸರ್ಕಾರ ತಂದ ಅಕ್ಕಿ ಭಾಗ್ಯ ಯೋಜನೆ ನಿಜಕ್ಕೂ ಅದ್ಭುತ.

ರಾಜ್ಯ ಸರ್ಕಾರ ಒಳ್ಳೊಳ್ಳೆ ಯೋಜನೆಗಳನ್ನು ಹಮ್ಮಿಕೊಳ್ಳುತ್ತ ಹಲವು ಭಾಗ್ಯಗಳನ್ನು ಪ್ರಕಟಿಸುತ್ತಿದೆ. ಆದರೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಜಾರಿಗೆಗೊಳಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯ ಬುದ್ಧಿವಂತರಾಗಿದ್ದರಿಂದಲೇ ಯಡಿಯೂರಪ್ಪನವರಂತೆ ಜೈಲಿಗೆ ಹೋಗಲಿಲ್ಲ. ಆದರೆ, ಗಣಿ ಹಗರಣಗಳಲ್ಲಿ ಸಿಲುಕಿದ್ದ ಶಾಸಕರಾದ ಆನಂದ ಸಿಂಗ್, ಬಿ. ನಾಗೇಂದ್ರ ಹಾಗೂ ಅಶೋಕ ಖೇಣಿ ಅಂಥವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವುದು ಸಿದ್ದರಾಮಯ್ಯ ಸಾಧನೆಗೆ ಕಪ್ಪು ಚುಕ್ಕೆ ಯಾಗಿದೆ ಎಂದರು.

loader