ನರೇಂದ್ರ ಮೋದಿಯವರು ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿ ಭಾಷಣ ಮಾಡಲಿರುವ ಎಸ್’ವಿಪಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ 2 ಕಿಮೀ ದೂರದಲ್ಲಿರುವ ಪಿವಿಎನ್ಆರ್ ಎಕ್ಸ್ ಪ್ರೆಸ್ ವೇ ಬಳಿಯ ಮೈಲಾರದೆವಪಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಎಸ್ಐ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೈದರಾಬಾದ್ (ನ.26): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೈದರಾಬಾದ್ ಭೇಟಿ ಹಿನ್ನೆಲೆ ಭದ್ರತೆಗೆ ನಿಯೋಜನೆಗೊಂಡಿದ್ದ ಸಬ್ ಇನ್ಸ್ ಪೆಕ್ಟಕ್ ಒಬ್ಬರು ತಮ್ಮ ಸೇವಾ ರಿವಾಲ್ವರ್ ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನರೇಂದ್ರ ಮೋದಿಯವರು ಪೊಲೀಸ್ ಅಧಿಕಾರಿಗಳನ್ನು ಉದ್ದೇಶಿ ಭಾಷಣ ಮಾಡಲಿರುವ ಎಸ್’ವಿಪಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ 2 ಕಿಮೀ ದೂರದಲ್ಲಿರುವ ಪಿವಿಎನ್ಆರ್ ಎಕ್ಸ್ ಪ್ರೆಸ್ ವೇ ಬಳಿಯ ಮೈಲಾರದೆವಪಲ್ಲಿಯ ಅಪಾರ್ಟ್ ಮೆಂಟ್ ನಲ್ಲಿ ಎಸ್ಐ ಶ್ರೀಧರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶ್ರೀಧರ್ ತಮ್ಮ ಎದೆಗೆ ಸೇವಾ ರಿವಾಲ್ವರ್’ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೋದಿ ಆಗಮನದ ಹಿನ್ನೆಲೆಯಲ್ಲಿ ಭದ್ರತೆಗಾಗಿ ಆಸಿಫಾಬಾದ್ ಜಿಲ್ಲೆಯ ಚಿಂಟಾಲಮನೆಪಲ್ಲಿ ಪೊಲೀಸ್ ಠಾಣೆಯಲ್ಲಿ ಎಸ್ಐ ಆಗಿದ್ದ ಶ್ರೀಧರ್ ಅವರನ್ನು ಹೈದರಾಬಾದ್ ಗೆ ನವೆಂಬರ್ 23 ರಂದು ಕರೆಯಿಸಿಕೊಳ್ಳಲಾಗಿತ್ತು.