ನಗರದ ರಾಜಭವನ ರಸ್ತೆಯಲ್ಲಿ ಒನ್‌ ವೇ ಇದ್ದರೂ ಬೈಕ್‌ನಲ್ಲಿ ಬಂದ ಸಬ್‌ ಇನ್ಸ್‌ಪೆಕ್ಟರ್‌ ಕೆ.ಪಿ. ಪಾತಲಿಂಗಪ್ಪ ಅವರಿಗೆ ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಪ್ರತಾಪ್‌ರೆಡ್ಡಿ ದಂಡ ವಿಧಿಸಿದ್ದಾರೆ.

ಬೆಂಗಳೂರು(ಫೆ.26): ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಗೆ ಬೆಂಗಳೂರಿನ ನಗರ ಸಶಸ್ತ್ರ ಮೀಸಲು ಪಡೆಯ ಸಬ್‌ಇನ್ಸ್‌ ಪೆಕ್ಟರ್‌ವೊಬ್ಬರು 100 ರೂಪಾಯಿ ದಂಡವನ್ನು ತೆತ್ತಿರುವ ಘಟನೆ ರಾಜ ಭವನ ರಸ್ತೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ನಗರದ ರಾಜಭವನ ರಸ್ತೆಯಲ್ಲಿ ಒನ್‌ ವೇ ಇದ್ದರೂ ಬೈಕ್‌ನಲ್ಲಿ ಬಂದ ಸಬ್‌ ಇನ್ಸ್‌ಪೆಕ್ಟರ್‌ ಕೆ.ಪಿ. ಪಾತಲಿಂಗಪ್ಪ ಅವರಿಗೆ ಕಬ್ಬನ್‌ಪಾರ್ಕ್ ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಪ್ರತಾಪ್‌ರೆಡ್ಡಿ ದಂಡ ವಿಧಿಸಿದ್ದಾರೆ. ಬೆಳಗ್ಗೆ ರಾಜಭವನ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ ಪ್ರತಾಪ್‌ ರೆಡ್ಡಿ ನಿರತರಾಗಿದ್ದರು. ಆ ವೇಳೆ ರಾಜಭವನ ಕಡೆಯಿಂದ ಬಂದ ಪಾತಲಿಂಗಪ್ಪ ಅವರು ಎದುರಾಗಿದ್ದಾರೆ. ತಪ್ಪು ಮಾಡಿದ್ದೀರಿ, ದಂಡವನ್ನು ಪಾವತಿಸಿ ತೆರಳುವಂತೆ ಇನ್ಸ್‌ಪೆಕ್ಟರ್‌ ಸೂಚಿಸಿದ ಬಳಿಕ ದಂಡ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ.