ಬಾಲಿವುಡ್’ಗೆ ಹಾರಿದ ಬಿಗ್’ಬಾಸ್ ಖ್ಯಾತಿಯ ಶೃತಿ ಪ್ರಕಾಶ್

First Published 12, Mar 2018, 8:33 AM IST
Shruthi prakash Act in Bollywood
Highlights

ಬಿಗ್‌'ಬಾಸ್ ಖ್ಯಾತಿಯ ಗಾಯಕಿ ಶ್ರುತಿ ಪ್ರಕಾಶ್ ಕನ್ನಡಕ್ಕೂ ಮುಂಚೆ ಬಾಲಿವುಡ್   ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ‘ಗುಮ್ನಾಮ್’ ಹೆಸರಿನ ಹಿಂದಿ ಕಿರುಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಸಂಗತಿಯನ್ನು ಅವರೇ ಬಹಿರಂಗಪಡಿಸಿದ್ದಾರೆ.

ಬೆಂಗಳೂರು (ಮಾ. 12): ಬಿಗ್‌'ಬಾಸ್ ಖ್ಯಾತಿಯ ಗಾಯಕಿ ಶ್ರುತಿ ಪ್ರಕಾಶ್ ಕನ್ನಡಕ್ಕೂ ಮುಂಚೆ ಬಾಲಿವುಡ್   ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ‘ಗುಮ್ನಾಮ್’ ಹೆಸರಿನ ಹಿಂದಿ ಕಿರುಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿರುವ ಸಂಗತಿಯನ್ನು ಅವರೇ ಬಹಿರಂಗಪಡಿಸಿದ್ದಾರೆ.

‘ಕನ್ನಡ  ಚಿತ್ರದಲ್ಲಿ ನಾಯಕಿಯಾಗಿ ನಾನು ಬೆಳ್ಳಿತೆರೆಗೆ ಪ್ರವೇಶಿಸುತ್ತಿರುವ ಬೆನ್ನಲ್ಲೇ ಹಿಂದಿಯಲ್ಲಿ  ‘ಗುಮ್ನಾಮ್’ ಚಿತ್ರ ಶುರುವಾಗುತ್ತಿದೆ’ ಎಂದಿದ್ದಾರೆ. ಅವರು ಕನ್ನಡದಲ್ಲಿ ರಾಜ್  ಸೂರ್ಯ ನಿರ್ದೇಶನದ ‘ಲಂಡನ್‌ನಲ್ಲಿ ಲಂಬೋದರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. 

loader