Asianet Suvarna News Asianet Suvarna News

ಹಬ್ಬಗಳ ಸಂದರ್ಭದಲ್ಲಿ ಸಾಲವನ್ನು ಪಡೆಯಲು ಬಯಸುತ್ತೀರಾ ?ಯೋಚಿಸಿ ಮುನ್ನಡೆಯಿರಿ

ಹಬ್ಬಗಳು ಸಮೀಪಿಸುತ್ತಿದ್ದಂತೆ ಬ್ಯಾಂಕ್'ಗಳು ವಿವಿಧ ರೀತಿಯ ಕೊಡುಗೆಗಳ ಮೂಲಕ ಸಾಲ ನೀಡಲು ಗ್ರಾಹಕರನ್ನು ಓಲೈಸುತ್ತವೆ. ಈ ಸಮಯದಲ್ಲಿ ಮರುಪಾವತಿ, ಆಯ್ಕೆ, ಅಗತ್ಯತೆ ಮುಂತಾದವನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುವುದು ಒಳ್ಳೆಯದು. ಹಬ್ಬಗಳ ಸಂದರ್ಭದಲ್ಲಿ  ಹಲವು ಪ್ರಮುಖ ಬ್ಯಾಂಕ್'ಗಳು ಗೃಹ, ವಾಹನ, ಚಿನ್ನ ಹಾಗೂ ವೈಯಕ್ತಿಕ  ಮುಂತಾದ ಸಾಲಗಳನ್ನು ಮನ್ನ ಮಾಡುತ್ತವೆ.

Should You Go For Festive Season Loan Offers

ಹಬ್ಬಗಳ ಸಾಲವು  ಕಡಿಮೆ ಬಡ್ಡಿ ದರಗಳು ಮತ್ತು ಪ್ರಕ್ರಿಯೆ ಶುಲ್ಕದಲ್ಲಿ ನೀಡಲಾಗುವ ವೈಯಕ್ತಿಕ ಸಾಲದ ಒಂದು ರೂಪಾಂತರವಾಗಿದೆ.  ಹಬ್ಬಗಳಲ್ಲಿ ಸಾಲದಂತೆ ಪಡೆದುಕೊಳ್ಳುವ ಮೊತ್ತವು ಸಾಮಾನ್ಯವಾಗಿ ಸೀಮಿತವಾಗಿರುತ್ತದೆ ಹಾಗೂ ವೈಯುಕ್ತಿಕ ಸಾಲಕ್ಕಿಂತ ಗರಿಷ್ಠ 50 ಸಾವಿರ ಕಡಿಮೆಯಿರುತ್ತದೆ. ಹಬ್ಬಗಳ ಸಾಲದ ಮರುಪಾವತಿಯ ಅವಧಿಗಳು ಬಹಳ ದೀರ್ಘಕಾಲದ್ದಾಗಿದ್ದು, ಬಹುತೇಕ ಸಾಲಗಳು ಒಂದು ವರ್ಷದ ಅವಧಿಯಲ್ಲಿ ನೀಡಲಾಗುತ್ತದೆ.

ಹಬ್ಬಗಳ ಸಾಲಕ್ಕಾಗಿ ಅರ್ಹತೆ

ನೀವು ಸಾಲ ಪಡೆಯಲು ಸಾಲ ಪಡೆದುಕೊಳ್ಳುವ ಸಾಮಾನ್ಯ ಅರ್ಹತಾ ಮಾನದಂಡಗಳಾದ ಆದಾಯ,ಕೆಲಸದ ಅನುಭವ, ವಯಸ್ಸು, ಇತರೆ ಮುಂತಾದವನ್ನು ಒದಗಿಸಬೇಕು. ಹಬ್ಬಗಳ ಸಾಲ ನಿಮ್ಮ ಸಂಗಾತಿಯಂದಿಗೆ ಜಂಟಿಯಾಗಿ ಪಡೆಯಬಹುದು. ನೀವು ವೈಯಕ್ತಿಕ ಸಾಲವನ್ನು ಪಡೆಯಬೇಕಿದ್ದರೆ ಹೆಚ್ಚಿನ ವರಮಾನ ಸೇರಿದಂತೆ ಕಟ್ಟುನಿಟ್ಟಿನ ಮಾನದಂಡಗಳಿರುತ್ತವೆ. ಆದರೆ ಹಬ್ಬದ ಸಂದರ್ಭದಲ್ಲಿ ಪಡೆದುಕೊಳ್ಳುವ ಸಾಲಕ್ಕೆ ಹೆಚ್ಚಿನ ಕಟ್ಟುನಿಟ್ಟು ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು 50,000 ರೂ ವರೆಗೆ ಸಾಲವನ್ನು ಸುಲಭವಾಗಿ ಪಡೆಯಬಹುದು .

ಹಬ್ಬಗಳ ಸಾಲ Vs ಕ್ರೆಡಿಟ್ ಕಾರ್ಡ್ ಇಎಂಐ

ಹಬ್ಬಗಳ ಸಾಲಕ್ಕೆ ಮೊತ್ತಕ್ಕೆ ಇಂತಿಷ್ಟು ನಿರ್ಬಂಧವಿರುತ್ತದೆ. ನಿರ್ದಿಷ್ಟ ವ್ಯಾಪಾರಿ / ಚಿಲ್ಲರೆ ವ್ಯಾಪಾರಿಗಳೊಂದಿಗೆ ಬ್ಯಾಂಕುಗಳ ಒಪ್ಪಂದದ ಮೇಲೆ ಅವಲಂಬಿತವಾಗಿರುವಂತೆ ಉತ್ಪನ್ನಗಳಿಂದ ಉತ್ಪನ್ನಕ್ಕೆ ಕೊಡುಗೆಗಳ ವ್ಯಾಪ್ತಿಯು ಬದಲಾಗುವ ಸಾಧ್ಯತೆಯಿರುತ್ತದೆ. ಕ್ರೆಡಿಟ್ ಕಾರ್ಡ್ ಇಎಂಐ ಕಳೆದುಕೊಂಡರೆ ಒಟ್ಟು ಮೊತ್ತದ ಆಧಾರದಂತೆ ನಿಮಗೆ ಹೆಚ್ಚಿನ ದಂಡ ವಿಧಿಸುವ ಸಾಧ್ಯತೆಯಿರುತ್ತದೆ. ಆದಾಗ್ಯಿಯೂ ಹಬ್ಬಗಳ ಅಡಿಯಲ್ಲಿ ಬರುವ ದಂಡವು ಕಡಿಮೆಯಿರುತ್ತದೆ ಅಥವಾ ಕೆಲವು ಸಂದರ್ಭಗಳಲ್ಲಿ ದಂಡ ವಿಧಿಸಲಾಗುವುದಿಲ್ಲ.

ಹಬ್ಬಗಳ ಸಾಲವನ್ನು ಬಹು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕು. ನೀವು ಪರಿಪೂರ್ಣವಾಗಿ ಓದಿದ ನಂತರ ಆಯ್ದು ಕೊಳ್ಳಬೇಕು. ಏಕೆಂದರೆ ಇದರಲ್ಲಿ ಗುಪ್ತ ಶುಲ್ಕಗಳು ಇರುತ್ತದೆ. ಪ್ರತಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ  ಹಬ್ಬದ ಸಾಲದ ಮೇಲೆ ಲಭ್ಯವಿರುವ ಪ್ರಯೋಜನಗಳು ಬದಲಾಗಬಹುದು. ಈ ಕಾರಣದಿಂದ ನೀವು ಈ ರೀತಿಯ ಸಾಲವನ್ನು ತೆಗೆದುಕೊಳ್ಳುವ ಮೊದಲು ಸಾಲದ ಉತ್ಪನ್ನಗಳ ಜವಾಬ್ದಾರಿಯನ್ನು ಸರಿಯಾದ ಮೌಲ್ಯಮಾಪನ ಮಾಡುವುದು ಮುಖ್ಯವಾಗಿರುತ್ತದೆ.

ಬಡ್ಡಿ ದರ

ವೈಯುಕ್ತಿಕ ಸಾಲಕ್ಕೆ ಶೇ.16ರಿಂದ 24ರವರೆಗೆ ಬಡ್ಡಿ ದರ ವಿಧಿಸಲಾಗುತ್ತದೆ. ಕ್ರೆಡಿಟ್ ಕಾರ್ಡ್ ಇಎಂಐಗೆ ಶೇ. 18ರಿಂದ 24ರವರೆಗೆ ವಿಧಿಸಲಾಗುತ್ತದೆ. ಆದರೆ ಹಬ್ಬಗಳ ಸಾಲದ ಬಡ್ಡಿದರ ಅತೀ ಕಡಿಮೆಯಿರುತ್ತದೆ.

ಶುಲ್ಕಗಳ ಹೋಲಿಕೆ

ವೈಯುಕ್ತಿಕ ಸಾಲದ ಮೇಲೆ ಹೆಚ್ಚಿನ ದರದ ಸಂಸ್ಕರಣ ಶುಲ್ಕವನ್ನು ವಿಧಿಸಲಾಗುತ್ತದೆ. ಅಂದರೆ ಸಾಲದ ಮೊತ್ತಕ್ಕೆ ಬಡ್ಡಿಯು ಶೇ.3ರಿಂದ ಪ್ರಾರಂಭವಾಗುತ್ತದೆ. ಅಂತೆಯೇ, ಕ್ರೆಡಿಟ್ ಕಾರ್ಡ್ ಇಎಂಐಗೆ ಸಹ ಸಂಸ್ಕರಣಾ ಶುಲ್ಕವನ್ನು ಶೇ.2ರ ವರೆಗೆ ವಿಧಿಸಲಾಗುತ್ತದೆ. ಹಬ್ಬಗಳ ಸಾಲದಲ್ಲಿ, ಸಂಸ್ಕರಣಾ ಶುಲ್ಕವನ್ನು ಕೇವಲ ಶೇ. 1 ರಷ್ಟು ಮಾತ್ರ ಪಾವತಿಸಬೇಕಾಗುತ್ತದೆ.

ದಂಡದ ಷರತ್ತುಗಳು

ನೀವು ವೈಯುಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲದ ಶುಲ್ಕಗಳ ಪೂರ್ವಪಾವತಿ ದಂಡಗಳು ಹಾಗೂ ಸ್ವತ್ತುಸ್ವಾಧೀನ ಶುಲ್ಕವನ್ನು ಮುಂಗಡವಾಗಿ ಪಾವತಿಸಿದರೆ ಹಬ್ಬಗಳ ಸಾಲದ ಅಡಿಯಲ್ಲಿನ ಸ್ವತ್ತುಸ್ವಾಧೀನ / ಪೂರ್ವಪಾವತಿ ಶುಲ್ಕಗಳನ್ನು ಪಾವತಿಸುವ ಅಗತ್ಯವಿರುವುದಿಲ್ಲ.  ವೈಯುಕ್ತಿಕ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಸಾಲಗಳ ಠೇವಣಿಯಡಿಯಲ್ಲಿರುವ ಪೂರ್ವಪಾವತಿ ಶುಲ್ಕವು ಪ್ರಧಾನ ಮೊತ್ತದಿಂದ ಶೇ.2 ರಿಂದ ಶೇ.4 ರಷ್ಟು ಹೆಚ್ಚಾಗಬಹುದು.

ನೀವು ಹಬ್ಬಗಳ ಸಾಲವನ್ನು ಪಡೆಯಲು ಬಯಸುತ್ತೀರಾ ?

ನೀವು ಹಬ್ಬಗಳ ಸಾಲವನ್ನು ಪಡೆಯಲು ಬಯಸಿದರೆ ಹೆಚ್ಚು ಮೊತ್ತದ ಉತ್ಪನ್ನಗಳಾದ ಮನೆ ಅಥವಾ ಕಾರುಗಳನ್ನು ಆಯ್ಕೆ ಮಾಡಿಕೊಳ್ಳಿ ಏಕೆಂದರೆ ಇವುಗಳಿಗೆ ಬ್ಯಾಂಕುಗಳು ಶೂನ್ಯ ಸಂಸ್ಕರಣ ಶುಲ್ಕಗಳನ್ನು ವಿಧಿಸುತ್ತವೆ. ಬಡ್ಡಿದರದ ರಿಯಾಯಿತಿಗಳನ್ನು ಪಡೆಯಬೇಕಾದರೆ ಹಬ್ಬದ ಅವಧಿಯೊಳಗೆ ಅರ್ಜಿಗಳನ್ನು ಸಲ್ಲಿಸಬೇಕು.

ಸಾಲದ ನಿಮ್ಮ ಆಯ್ಕೆಯು ನೀವು ಪಡೆಯುವ ಸಾಲ ಮತ್ತು ಮೊತ್ತದ ಅವಧಿಯನ್ನು ಅವಲಂಬಿಸಿರುತ್ತದೆ. ಹಬ್ಬಗಳ ಸಾಲವು ಪ್ರಸ್ತುತ 50 ಸಾವಿರದವರೆಗೆ ಲಭ್ಯವಿರುತ್ತದೆ ಹಾಗೂ ಇದರ ಇವಧಿ 12 ತಿಂಗಳುಗಳವರೆಗೂ ಇರುತ್ತದೆ. ಆದ ಕಾರಣದಿಂದ ನಿಮ್ಮ ಸಾಲದ ಅವಶ್ಯಕತೆ ಹೆಚ್ಚಿದ್ದರೆ ಅಥವಾ ನೀವು ಹೆಚ್ಚಿನ ಮರುಪಾವತಿಯ ಅವಧಿಯನ್ನು ಹುಡುಕುತ್ತಿದ್ದರೆ, ವೈಯಕ್ತಿಕ ಸಾಲವು ಅತ್ಯುತ್ತಮ ಆಯ್ಕೆಯಾಗಬಹುದು, ಅಲ್ಲದೆ  ಹಬ್ಬದ ಸಾಲವು ಕೂಡ ಲಾಭದಾಯಕ ಆಯ್ಕೆಯಾಗಿದೆ.

ಕೊನೆಯದಾಗಿ ಸಾಲವನ್ನು ತೀರಿಸಲೇ ಬೇಕಾದ ಕಾರಣದಿಂದ ನೀವು ಹೆಚ್ಚಿನ ಶಾಪಿಂಗ್ ಮಾಡದಿರುವುದು ಒಳ್ಳೆಯದು ಹಾಗೂ ಜಾಣ್ಮೆಯ ನಡೆಯಾಗಿದೆ.

-ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್'ಬಜಾರ್

(ಬ್ಯಾಂಕ್ ಬಜಾರ್ ಒಂದು ಆನ್’ಲೈನ್ ಮಾರುಕಟ್ಟೆ ತಾಣವಾಗಿದ್ದು, ಗ್ರಾಹಕರು  ಕ್ರೆಡಿಟ್ ಕಾರ್ಡ್, ವೈಯುಕ್ತಿಕ ಸಾಲ, ಗೃಹ ಸಾಲ, ವಾಹನ ಸಾಲ ಹಾಗೂ ವಿಮೆಗಳನ್ನು  ತುಲನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ)

Follow Us:
Download App:
  • android
  • ios