ಸೆX ರಾಕೆಟ್‌ಗೆ ಬಳಸಿ ನಂತ್ರ ಹುಡುಗಿಯರ ಮತಾಂತರ, ಕಿಂಗ್ ಪಿನ್ ಅಮ್ರೀನ್ ಅಫ್ರೀನ್ ಸಿಸ್ಟರ್ಸ್ ಅರೆಸ್ಟ್, ಕೆಲಸ ಕೊಡಿಸುವುದಾಗಿ ಯುವತಿಯರನ್ನು ಆಯ್ಕೆ ಮಾಡಿಕೊಂಡು ಶ್ರೀಮಂತರ ಪಾರ್ಟಿಯಲ್ಲಿ ಯೂಸ್ ಆ್ಯಂಡ್ ಥ್ರೋ ವಸ್ತುವಾಗಿ ಬಳಕೆ ಮಾಡಲಾಗುತ್ತಿತ್ತು 

ಭೋಪಾಲ್ (ಫೆ.24) ಮನೆ ಕೆಲಸ ಸೇರಿದಂತೆ ಇತರ ಕೆಲಸ ಕೊಡಿಸುವ ನೆಪದಲ್ಲಿ ಹಲವು ಯುವತಿಯರ ಆಯ್ಕೆ ಮಾಡಿಕೊಂಡು ಬಳಿಕ ಅವರನ್ನು ಅನೈತಿಕ ಚಟುವಟಿಕೆಗಳಿಗೆ ಬಳಸಿ ಮತಾಂತರ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇಬ್ಬರು ಸಹೋದರಿಯರಾದ ಅಮ್ರೀನ್ ಹಾಗೂ ಅಫ್ರೀನ್ ಅರೆಸ್ಟ್ ಮಾಡಲಾಗಿದೆ. ಶ್ರೀಮಂತರ ಪಾರ್ಟಿಗಳಲ್ಲಿ ಬಳಕೆ ಮಾಡಲು ಯುವತಿಯರನ್ನು ಕಳುಹಿಸಿ ಕೊಡಲಾಗುತ್ತಿತ್ತು. ಹೀಗೆ ಶ್ರೀಮಂತರು ರಾತ್ರಿ ಇಡೀ ಬಳಸಿಕೊಂಡ ಬಳಿಕ ಮತಾಂತರ ಮಾಡಿ ಮುಸ್ಲಿಮ ಮುದುಕರ ಜೊತೆ ಮದುವೆ ಮಾಡಿಸುವ ಜಾಲವನ್ನು ಭೋಪಾಲ ಪೊಲೀಸರು ಪತ್ತೆ ಹಚ್ಚಿದ್ದಾರೆ.

Add Asianetnews Kannada as a Preferred SourcegooglePreferred

ದೂರಿನಲ್ಲಿದೆ ಸ್ಫೋಟಕ ಮಾಹಿತಿ

ಇಬ್ಬರು ಯುವತಿಯರು ಭೋಪಾಲ್ ಭಾಗಾ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದರು. ಮನೆ ಕೆಲಸಕ್ಕೆಂದು ಸಂದರ್ಶನ ಮಾಡಿ ಆಯ್ಕೆ ಮಾಡಿಕೊಂಡಿದ್ದರು. ಅಮ್ರೀನ್ ಹಾಗೂ ಅಫ್ರೀನ್ ಜೊತೆಗೆ ಚಂದನ್ ಯಾದವ್ ಅನ್ನೋ ಮತ್ತೊಬ್ಬ ಸಂದರ್ಶನ ಮೂಲಕ ಆಯ್ಕೆ ಮಾಡಿದ್ದರು. ಬಳಿಕ ಕೆಲಸದ ಬದಲು ಶ್ರೀಮಂತರ ಪಾರ್ಟಿ, ಕ್ಲಬ್ ಪಾರ್ಟಿಗೆ ನಮ್ಮನ್ನು ಕಳುಹಿಸಿಕೊಟ್ಟಿದ್ದರು. ಅಲ್ಲಿ ಮದ್ಯ , ಮತ್ತು ಭರಿಸುವ ವಸ್ತುಗಳನ್ನು ನಮಗೆ ನೀಡಿ ನಿರಂತರವಾಗಿ ಬಳಸಿಕೊಂಡಿದ್ದಾರೆ. ಕಳದ ಕೆಲ ತಿಂಗಳಿನಿಂದ ನಮ್ಮ ಮೇಲೆ ಈ ರೀತಿ ನಡೆಯುತ್ತಿದೆ. ನಾವು ಅವರ ಸುಪರ್ದಿ ಬಿಟ್ಟು ಹೋಗುವಂತೆ ಇರಲಿಲ್ಲ. ಆರೋಗ್ಯ ಹದಗೆಟ್ಟ ಕಾರಣ ನಾವು ಆಸ್ಪತ್ರೆ ನೆಪದದಲ್ಲಿ ಹೊರಬಂದು ದೂರು ನೀಡುತ್ತಿದ್ದೇವೆ ಎಂದು ಇಬ್ಬರು ಯುವತಿಯರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.

ಕೆಲಸ ಕೊಡಿಸುವು ಈ ಎಜೆನ್ಸಿ ಸಿಬ್ಬಂದಿಗಳೇ ಮೊದಲು ಬಳಸಿಕೊಳ್ಳುತ್ತಿದ್ದರು. ಒಬ್ಬರ ಹಿಂದೆ ಒಬ್ಬರಂತೆ ಬಳಸಿಕೊಂಡು ಪಾರ್ಟಿ, ಪಬ್‌ಗಳಿಗೆ ಕಳುಹಿಸುತ್ತಿದ್ದರು. ನಾವಿಬ್ಬರು ಧೈರ್ಯ ಮಾಡಿ ದೂರು ನೀಡಿದ್ದೇವೆ. ಆದರೆ ಹಲವು ಯುವತಿಯರು ಈ ನರಕಕ್ಕೆ ತಳ್ಳಿದ್ದಾರೆ. ಕೆಲ ಯುವತಿಯರನ್ನು ವರ್ಷಗಳ ಕಾಲ ಬಳಸಿಕೊಂಡು ಬಳಿಕ ಮತಾಂತರ ಮಾಡಿದ್ದಾರೆ. ಮುಸ್ಲಿಮ್ ಮುದುಕರಿಗೆ ಮದುವೆ ಮಾಡಿಸಿದ್ದಾರೆ. ನಮ್ಮ ಮೇಲೂ ಬಲವಂತವಾಗಿ ಮತಾಂತರ ಯತ್ನಗಳು ನಡೆದಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.

ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಮ್ರೀನ್ ಹಾಗೂ ಆಫ್ರೀನ್ ಸಹೋದರಿಯನ್ನು ಅರೆಸ್ಟ್ ಮಾಡಿದ್ದಾರೆ. ಇವರ ಜೊತೆ ಚಂದನ್ ಯಾದವ್ ಅನ್ನೋ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಇತ್ತ ಯಾಸಿರ್, ಬಿಲಾಲ್ ಹಾಗೂ ಚಾನು ಎಂಬ ಮೂವರು ತಲೆಮರೆಸಿಕೊಂಡಿದ್ದಾರೆ.

ತನಿಖೆ ವೇಳೆ ಕೆಲ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಭೋಪಾಲದ ಅಬ್ಬಾಸ್ ನಗರದ ಸ್ಲಂನಲ್ಲಿದ್ದ ಈ ಅಮ್ರೀನ್ ಹಾಗೂ ಆಫ್ರೀನ್ ಮುಸ್ಲಿಂ ಸಹೋದರಿಯರು ಅಕ್ರಮ ಚಟುವಟಿಕೆ ಮೂಲಕ ಭಾರಿ ಹಣ ಸಂಪಾದನೆ ಮಾಡಿದ್ದರು. ಇಷ್ಟೇ ಅಲ್ಲ ಇತ್ತೀಚೆಗೆ ಭೋಪಾಲ್ ನಗರದ ಹೊರವಲಯದಲ್ಲಿ ವಿಲ್ಲಾ ಖರೀದಿಸಿ ಸ್ಥಳಾಂತರಗೊಂಡಿದ್ದಾರೆ. ಹಿಂದೂ ಹುಡುಗಿಯರನ್ನೇ ಟಾರ್ಗೆಟ್ ಮಾಡಿ ಈ ದಂಧೆ ನಡೆಸುತ್ತಿದ್ದರು ಎಂದು ವರದಿಯಾಗಿದೆ.