ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ನಿನ್ನೆ ರಾತ್ರಿ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ಕ್ರಿಮಿನಲ್'​ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಬೆಂಗಳೂರು(ಆ.11): ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ನಿನ್ನೆ ರಾತ್ರಿ ಪೊಲೀಸರ ಮೇಲೆ ದಾಳಿ ಮಾಡಲು ಮುಂದಾದ ಕ್ರಿಮಿನಲ್'​ಗಳ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ನಗರದ ಹೊರವಲಯದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿ ರೋಡ್ ಬಳಿ ಶೂಟೌಟ್​ ನಡೆದಿದೆ. ಕುಖ್ಯಾತ ಕಿಡ್ನಾಪರ್ ವಿಜಯ್ ಅಂಡ್ ಅವನ ಗ್ಯಾಂಗ್ ಡಿ ರೋಡಲ್ಲಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬ್ಯಾಡರಹಳ್ಳಿ ಪೊಲೀಸ್ರು ಬಂಧಿಸಲು ಮುಂದಾದ್ರು. ಆದ್ರೆ ಈ ವೇಳೆ ಖತರ್ನಾಕ್ ಗ್ಯಾಂಗ್ ಪೊಲೀಸರ ಮೇಲೆಯೇ ಮುಗಿಬಿದ್ದಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಬ್ಯಾಡರಹಳ್ಳಿ ಸಬ್ ಇನ್ಸ್​ಪೆಕ್ಟರ್ ದಾಳೇಗೌಡ ಒಂದು ಸುತ್ತು ಗುಂಡು ಹಾರಿಸಿದ್ದಾರೆ.

ವಿಜಯನ ಅಟ್ಟಹಾಸ ಮುಂದುವರೆದಾಗ ಇನ್ಸ್​ಪೆಕ್ಟರ್​ ಸತ್ಯನಾರಾಯಣ ವಿಜಯ್​ ಬಲಗಾಲಿಗೆ ಶೂಟ್​ ಮಾಡಿದ್ದಾರೆ. ಗುಂಡೇಟು ತಿಂದ ವಿಜಯ್​ನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತನ ಸಹಚರರಾದ ಹರೀಶ್, ನವೀನ್, ಬಳ್ಳಾರಿ ಹಾಗೂ ವಿಜಯ್ ಎಂಬುವರನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಪೇದೆ ಭೈರಪ್ಪಗೆ ಗಾಯವಾಗಿದೆ.