ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಬಂದ ನಂತರ ಸಿಎಂ ಕುಮಾರಸ್ವಾಮಿ ರಾಜ್ಯಕ್ಕೆ ತಂದ ಯೋಜನೆಗಳ ಪಟ್ಟಿಯನ್ನು ಹೇಳಿದ್ದಾರೆ. ಆದರೆ ಸಂಸದೆ ಶೋಭಾ ಕರಂದ್ಲಾಜೆ ಕುಮಾರಸ್ವಾಮಿ ಅವರನ್ನು ಕೇವಲ ಹಾಸನ ಜಿಲ್ಲೆಯ ಸಿಎಂ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾದರೆ ಇದಕ್ಕೆ ಕಾರಣ ಏನು?

ಬೆಂಗಳೂರು[ಡಿ.27] ಕುಮಾರಸ್ವಾಮಿ ಕೇವಲ ಹಾಸನ ಜಿಲ್ಲೆಯ ಸಿಎಂ ಎಂದು ಟ್ವಿಟರ್ ನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಕುಟುಕಿದ್ದಾರೆ. 6 ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಹಾಸನಕ್ಕೆ ಪಡೆದುಕೊಂಡು ಬಂದಿದ್ದಾರೆ. ಇದರ ಹಿಂದಿನ ಕಾರಣ ಏನು ಎಂದು ಪ್ರಶ್ನೆ ಮಾಡಿದ್ದಾರೆ. 

ಕೇಂದ್ರ ಸಾರಿಗೆ ಸಚಿವರ ಭೇಟಿ ವೇಳೆ ಹಾಸನ ಜಿಲ್ಲೆಗೆ ಸಂಬಂದಿಸಿದ ಯೋಜನೆಗಳೇ ಇವೆ. ಇದು ರಾಜ್ಯದ ಇತರ ಜಿಲ್ಲೆಗಳನ್ನ ಬಹುದೊಡ್ಡ ತಿರಸ್ಕಾರ ಮನೋಭಾವ ತೋರಿಸುತ್ತದೆ ಎಂದು ಟ್ವೀಟ್ ಮಾಡಿ ಶೋಭಾ ಆಕ್ರೋಶ ಹೊರಹಾಕಿದ್ದಾರೆ.

Scroll to load tweet…