ರಾಹುಲ್ ಗಾಂಧಿಯವರೇ, ಕರಾವಳಿ ಪ್ರದೇಶದಲ್ಲಿ ನಡೆದ  ಹಿಂದೂಗಳ ಹತ್ಯೆಯ ಬಗ್ಗೆ ನಿಮ್ಮ ನಿಲುವೇನು?

First Published 20, Mar 2018, 4:32 PM IST
Shobha Karandlaje Challenges Rahul Gandhi
Highlights

ರಾಹುಲ್ ಗಾಂಧಿ ಕರಾವಳಿ ಭೇಟಿ ಬಗ್ಗೆ ಶೋಭಾ ಕರಂದ್ಲಾಜೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ. 

ಬೆಂಗಳೂರು (ಮಾ. 20): ರಾಹುಲ್ ಗಾಂಧಿ ಕರಾವಳಿ ಭೇಟಿ ಬಗ್ಗೆ ಶೋಭಾ ಕರಂದ್ಲಾಜೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ. 

ರಾಹುಲ್ ಗಾಂಧಿಯವರೇ,  ಕರಾವಳಿ ಪ್ರದೇಶದಲ್ಲಿ ನಡೆದ  ಹಿಂದೂಗಳ ಹತ್ಯೆಯ ಬಗ್ಗೆ ನಿಮ್ಮ ನಿಲುವೇನು? ಹತ್ಯೆಯ ಆರೋಪಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು CM ಮಾಡುತ್ತಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ?  ಕರಾವಳಿಯ ಇಂದಿನ‌ ಸ್ಥಿತಿಗೆ ಮರಳು ಮಾಪಿಯಾ & ಡ್ರಗ್ ಮಾಫಿಯಾ ಕರಾವಳಿ ಕಲುಷಿತವಾಗಲು ಕಾರಣ. ಒಪ್ಪುತ್ತೀರಾ?

ಜನಾರ್ದನ್ ಪೂಜಾರಿಯವರ ಇಂದಿನ ಸ್ಥಿತಿಗೆ ರಾಮನಾಥ್ ರೈ ಕಾರಣ, ಈ ವೇಳೆ ಪೂಜಾರಿ ಅವರಿಗೆ ಏನನ್ನೂ ಹೇಳಲು ಬಯಸುತ್ತೀರಾ ? ಕರಾವಳಿಯ ಪ್ರಕ್ಷುಬ್ಧ ವಾತಾವರಣಕ್ಕೆ ಕಾರಣವಾದ ಪಿಎಫ್’ಐ ಕಾರಣ. ಇಂತವರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶ ಮಾಡಲು ಅವಕಾಶ ಕೊಟ್ಟು, ರಕ್ಷಣೆಗೆ ನೀಡುತ್ತಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಾ?  
ಕಲಡ್ಕ ಪ್ರಭಾಕರ್ ಭಟ್ ಅವರು ನಡೆಸುತ್ತಿದ್ದ ಶಾಲೆಗೆ ಬಿಸಿ ಊಟ ನಿಲ್ಲಿಸಿ, ಶಾಲಾ ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿದ್ದೀರಾ? ಇದು ಸರಿನಾ?  ಈ ಮೇಲಿನ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಉತ್ತರಿಸಲಿ ಎಂದು ಸವಾಲು ಹಾಕಿದ್ದಾರೆ. 
 

loader