ಅವರಿಂದ ಬಹಳಷ್ಟು ನಿರೀಕ್ಷೆಗಳಿತ್ತು, ಆದರೆ ಅವೆಲ್ಲಾವನ್ನು ಅವರು ಹುಸಿಗೊಳಿಸಿದ್ದಾರೆ. ತಾವು ಯುದ್ಧಭೂಮಿಯಲ್ಲಿದ್ದೇವೆ ಎಂಬಂತೆ ಜನರು ನಂಬಿಸಲು ಪ್ರಧಾನಿ ಪ್ರಯತ್ನಪಡುತ್ತಿದ್ದಾರೆ, ಎಂದು ಶಿವಸೇನೆ ಮುಖಂಡೆ ಮನೀಶಾ ಕಾಯಂಡೆ ಹೇಳಿದ್ದಾರೆ.

ನವದೆಹಲಿ (ಜ.01): ನರೇಂದ್ರ ಮೋದಿಯವರ ವಿರುದ್ಧ ಟೀಕಾಪ್ರಹಾರವನ್ನು ಮುಂದುವರಿಸಿರುವ ಮಿತ್ರಪಕ್ಷ ಶಿವಸೇನೆಯು, ಪ್ರಧಾನಿಯ ಹೊಸ ವರ್ಷದ ಭಾಷಣದಲ್ಲಿ ಯಾವುದೇ ಹೊಸವಿಚಾರಗಳಿಲ್ಲವೆಂದು ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅವರಿಂದ ಬಹಳಷ್ಟು ನಿರೀಕ್ಷೆಗಳಿತ್ತು, ಆದರೆ ಅವೆಲ್ಲಾವನ್ನು ಅವರು ಹುಸಿಗೊಳಿಸಿದ್ದಾರೆ. ತಾವು ಯುದ್ಧಭೂಮಿಯಲ್ಲಿದ್ದೇವೆ ಎಂಬಂತೆ ಜನರು ನಂಬಿಸಲು ಪ್ರಧಾನಿ ಪ್ರಯತ್ನಪಡುತ್ತಿದ್ದಾರೆ, ಎಂದು ಶಿವಸೇನೆ ಮುಖಂಡೆ ಮನೀಶಾ ಕಾಯಂಡೆ ಹೇಳಿದ್ದಾರೆ.

ಆದಾಯ ತೆರಿಗೆ ಹಾಗೂ ಇನ್ನಿತರ ಮುಖ್ಯ ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಲೇ ಇಲ್ಲ, ಎಂದು ಅವರು ಟೀಕಿಸಿದ್ದಾರೆ.

ನಿನ್ನೆ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರೈತರಿಗೆ, ಗರ್ಭವತಿ ಮಹಿಳೆಯರಿಗೆ ಹಾಗೂ ಹಿರಿಯ ನಾಗರಿಕರಿಗೆ ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರು. ಅವರ ಭಾಷಣಕ್ಕೆ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.