ಎಲ್ಲವೂ ಶಿವಲೀಲೆ! ಶಿವಣ್ಣರಾಗಿದ್ದವರು ಸಿದ್ಧಗಂಗಾ ಶ್ರೀಗಳಾಗಿದ್ದೇ ಪವಾಡ
ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿ ಒಂದು ವರ್ಷ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಸಾರ್ಥಕ ಜೀವನ ನಡೆಸಿದ ಶತಾಯುಷಿ ಸಿದ್ಧಗಂಗಾ ಶ್ರೀಗಳು. ಮಠದ ಜವಾಬ್ದಾರಿಯನ್ನು ಹೊತ್ತಂದಿನಿಂದ ನಿರಂತರವಾಗಿ ತ್ರಿವಿಧ ದಾಸೋಹವನ್ನು ಮಾಡಿಕೊಂಡು ಬಂದಿದ್ದ ಖ್ಯಾತಿ ಅವರದ್ದು. ಶ್ರೀಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ.
ತುಮಕೂರು (ಜ. 21): ತ್ರಿವಿಧ ದಾಸೋಹಿ, ಕಾಯಕಯೋಗಿ ಸಿದ್ದಗಂಗಾ ಶ್ರೀಗಳು ಲಿಂಗೈಕ್ಯರಾಗಿ ಬರೋಬ್ಬರಿ 1 ಉರುಳಿದೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ಪಾಲಿಸಿಕೊಂಡು ಸಾರ್ಥಕ ಜೀವನ ನಡೆಸಿದ ಶತಾಯುಷಿ ಸಿದ್ಧಗಂಗಾ ಶ್ರೀಗಳು. ಮಠದ ಜವಾಬ್ದಾರಿಯನ್ನು ಹೊತ್ತಂದಿನಿಂದ ನಿರಂತರವಾಗಿ ತ್ರಿವಿಧ ದಾಸೋಹವನ್ನು ಮಾಡಿಕೊಂಡು ಬಂದವರು. ಶ್ರೀಗಳು ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸಿದ ಮಹಾತ್ಮ.
ಶ್ರೀ ಲಿಂಗೈಕ್ಯ : ಜ.22 ರಂದು ರಾಜ್ಯಾದ್ಯಂತ ಸರ್ಕಾರಿ ರಜೆ
ಪೂರ್ವಾಶ್ರಮ
ಮಾಗಡಿ ತಾಲೂಕಿನ ವೀರಾಪುರದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗೆ ಏ. 1 , 1907 ರಲ್ಲಿ ಜನಿಸಿದರು. ಎಲ್ಲರೂ ಬಹಳ ಪ್ರೀತಿಯಿಂದ ಶಿವಣ್ಣ ಎಂದು ಕರೆಯುತ್ತಿದ್ದರು. ಎಲ್ಲರಿಗಿಂತ ಕಿರಿಯರಾದ ಶಿವಣ್ಣನವರ ಮೇಲೆ ತಂದೆ ತಾಯಿಗೆ ಅಪಾರ ಪ್ರೀತಿ. ಹೀಗೆ ಬೆಳೆಯುತ್ತಾ ಬೆಳೆಯುತ್ತಾ ವೀರಾಪುರದ ಕೂಲಿಮಠದ ಮರಳಿನ ಮೇಲೆ ಅಕ್ಷರಾಭ್ಯಾಸ ಮಾಡುವ ಮೂಲಕ ಶೈಕ್ಷಣಿಕ ಜೀವನ ಆರಂಭಿಸಿದರು.
ಶತಮಾನದ ಸಂತ ಸಿದ್ಧಗಂಗಾ ಶ್ರೀಗಳ ನೆನಪು-ಮೆಲುಕು
ಶಿವಣ್ಣರು ಓದುತ್ತಾ ಓದುತ್ತಾ ಸಿದ್ಧಗಂಗಾ ಮಠಾಧಿಪತಿಗಳಾಗಿದ್ದ ಶ್ರೀ ಉದ್ದಾನ ಶಿವಯೋಗಿಗಳ ಒಡನಾಟ ಆಗುತ್ತೆ. ಉನ್ನತ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಬರುತ್ತಾರೆ. ಆಗಲೂ ಮಠದ ಸಂಪರ್ಕ ಮುಂದುವರೆಯುತ್ತದೆ.
ಶ್ರೀಗಳು ಶಿವೈಕ್ಯ: ಚಿತ್ರರಂಗ ಕಂಬನಿ ಮಿಡಿದಿದ್ದು ಹೀಗೆ
ಶಿವನಾಟ ಬಲ್ಲವರ್ಯಾರು?
ಹೀಗಿರುವಾಗ ಒಂದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಶಿವಣ್ಣರ ಜೀವನಕ್ಕೆ ತಿರುವನ್ನೇ ಕೊಡುತ್ತದೆ. ಶಿವಲೀಲೇ ಅಂದ್ರೆ ಇದೇ ಇರಬೇಕು. ಇದ್ದಕ್ಕಿದ್ದಂತೆ ಉದ್ಧಾನ ಶಿವಯೋಗಿಗಳ ಕಿರಿಯ ಶ್ರೀಗಳು ಶಿವೈಕ್ಯರಾಗುತ್ತಾರೆ. ಅವರ ಅಂತಿಮ ಕ್ರಿಯಾವಿಧಿಗೆ ತೆರಳಿದ್ದ ಶಿವಣ್ಣರ ಮೇಲೆ ಉದ್ಧಾನ ಶ್ರೀಗಳ ಗಮನ ಹರಿಯುತ್ತದೆ. ಮನೆಯವರ ಒಪ್ಪಿಗೆಗೂ ಕಾಯದೇ ಎಲ್ಲರ ಸಮ್ಮುಖದಲ್ಲೇ ಶಿವಣ್ಣನೇ ಸಿದ್ದಗಂಗಾ ಮಠದ ಉತ್ತರಾಧಿಕಾರಿ ಎಂದು ಘೋಷಿಸಿ ಬಿಡುತ್ತಾರೆ.
ಅಂತ್ಯ ಸಂಸ್ಕಾರಕ್ಕೆ ಹೋಗಿದ್ದ ಶಿವಣ್ಣ ಹಿಂತಿರುಗಿ ಬರುವಾಗ ಕಾವಿ, ರುದ್ರಾಕ್ಷಿ ಧರಿಸಿದ ಶಿವಕುಮಾರ ಸ್ವಾಮಿಗಳಾಗಿ ಬದಲಾಗುತ್ತಾರೆ. ಮುಂದೆ ನಡೆದದ್ದೆಲ್ಲಾ ಶಿವಲೀಲೆ!