ಕರುನಾಡ ಹೆಮ್ಮೆ, ಶತಾಯುಷಿ, ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳು ತಮ್ಮ ತುಂಬು 111 ವರ್ಷಗಳ ಸಾರ್ಥಕ ಜೀವನದ ಪಯಣವನ್ನು ಮುಗಿಸಿದ್ದಾರೆ. ಇಂಥ ಅಪರೂಪದ ಮಾಣಿಕ್ಯವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದು ಹೀಗೆ.....

ರಾಕಿಂಗ್ ಸ್ಟಾರ್ ಯಶ್ ಶಿವಕುಮಾರ ಸ್ವಾಮೀಜಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಬೇಡುವ ಕೈಗಳಿಗಿಂತ, ದುಡಿಯುವ ಕೈಗಳು ಮೇಲು ಎಂಬುದನ್ನು ತೋರಿಸಿಕೊಟ್ಟು ಒಬ್ಬ ಮನುಷ್ಯ ಹೇಗೆ ಸಾರ್ಥಕ್ಯವಾಗಿ ಬದುಕಬೇಕೆಂಬುದಕ್ಕೆ ಜೀವಂತ ನಿದರ್ಶನವಾದವರು ತ್ರಿವಿಧ ದಾಸೋಹಿ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ನಡೆದಾಡುವ ದೇವರು ಕಾಣದ ದೇವರೊಂದಿಗೆ ಐಕ್ಯರಾಗಿದ್ದಾರೆ.ಹೋಗಿ ಬನ್ನಿ ಬುದ್ಧಿ..ಮತ್ತೆ ಬನ್ನಿ ಎಂದು ಬರೆದು ನಮನ ಸಲ್ಲಿಸಿದ್ದಾರೆ.