Asianet Suvarna News

ನಾವು ಬಗ್ಗಲ್ಲ: ಶಿವಸೇನೆ ‘ಮಹಾ’ ಸಿಎಂ ಪಟ್ಟ ಕಸಿಯದೇ ಬಿಡಲ್ಲ!

ಮಹಾರಾಷ್ಟ್ರದಲ್ಲಿ ಮುಂದುವರೆದ ಸರ್ಕಾರ ರಚನೆ ಬಿಕ್ಕಟ್ಟು/ ಮುಖ್ಯಮಂತ್ರಿ ಗಾದಿಗಾಗಿ ಪಟ್ಟು ಬಿಡದ ಶಿವಸೇನೆ/ ನಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದ ಶಿವಸೇನೆ/ 50-50 ಸೂತ್ರದ ಜಾರಿಯೊಂದೇ ಬಿಕ್ಕಟ್ಟಿಗೆ ಪರಿಹಾರ ಎಂದ ಶಿವಸೇನೆ/ ಮೈತ್ರಿ ಕಡಿದುಕೊಂಡಾದರೂ ಸರಿ ಪಟ್ಟು ಬಿಡಲ್ಲ ಎಂದ ಶಿವಸೇನೆ/ ಶಿವಸೇನೆ ಮರಾಠಿಗರ ಹಕ್ಕಿಗಾಗಿ ಹೋರಾಡುತ್ತಿದೆ ಎಂದ ಸಂಜಯ್ ರಾವುತ್/ ಶಿವಸೇನೆ ಪಟ್ಟಿನಿಂದ ಕಂಗಾಲಾಗಿರುವ ಮಿತ್ರ ಪಕ್ಷ  ಬಿಜೆಪಿ/

Shiv Sena Refuses To Budge In Tussle With Ally BJP in Maharashtra
Author
Bengaluru, First Published Nov 5, 2019, 1:23 PM IST
  • Facebook
  • Twitter
  • Whatsapp

ಮುಂಬೈ(ನ.05): ಮುಖ್ಯಮಂತ್ರಿ ಗಾದಿಗಗಿ ಪಟ್ಟು ಹಿಡಿದಿರುವ ಶಿವಸೇನೆ, ಮಹಾರಾಷ್ಟ್ರಕ್ಕೆ ನಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಿಸಿದೆ.

ಯಾವುದೇ ಕಾರಣಕ್ಕೂ ಬಿಜೆಪಿ ಮುಂದೆ ಮಂಡಿಯೂರಲ್ಲ ಎಂದು ಸ್ಪಷ್ಟಪಡಿಸಿರುವ ಶಿವಸೇನೆ, ಮೈತ್ರಿ ಕಡಿದುಕೊಂಡಾದರೂ ಸರಿ ನಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಈ ಕುರಿತು ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವುತ್, 50-50 ಸೂತ್ರದ ಜಾರಿಯೊಂದೇ ಸದ್ಯದ ಬಿಕ್ಕಟ್ಟಿನಿಂದ ಹೊರಬರಲು ಇರುವ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.

ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಬಿಜೆಪಿ ನಾಯಕನ ಹೊಸ ವರಾತ!

ಮಹಾರಾಷ್ಟ್ರದಲ್ಲಿ ಶಿವಸೇನೆ ಗಲಾಟೆ ಮಾಡುತ್ತಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಆದರೆ ಶಿವಸೇನೆ ಮರಾಠಿಗರ ಹಕ್ಕಿಗಾಗಿ ಹೋರಾಡುತ್ತಿದೆ ಎಂದು ರಾವುತ್ ಸ್ಪಷ್ಟಪಡಿಸಿದರು.

ಮೈತ್ರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಸುತಾರಾಂ ಒಪ್ಪದ ಬಿಜೆಪಿ ಮುಂದೆ ಮಂಡಿಯೂರಿದರೆ ಮರಾಠಿಗರಿಗೆ ಅನ್ಯಾಯ ಮಾಡಿದಂತೆ ಎಂದು ರಾವುತ್ ಮಾರ್ಮಿಕವಾಗಿ ನುಡಿದಿದ್ದಾರೆ.

ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ

ನನ್ನನ್ನೇ ಮುಖ್ಯಮಂತ್ರಿ ಮಾಡಿ : ರಾಜ್ಯಪಾಲರಿಗೆ ರೈತನ ಪತ್ರ

ಎನ್’ಸಿಪಿ ಜೊತೆಗೆ ಮೈತ್ರಿಗೆ ಮಾತುಕತೆಯಾಗಿದೆಯೇ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ರಾವುತ್, ಕಾದು ನೋಡಿ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ಮಹಾರಾಷ್ಟ್ರದಲ್ಲಿ ಬಹುಮತವಿದ್ದರೂ ಸರ್ಕಾರ ರಚಿಸಿಲು ಒದ್ದಾಡುತ್ತಿದೆ ಬಿಜೆಪಿ

ಇನ್ನು ಶಿವಸೇನೆ ಪಟ್ಟಿನಿಂದ ಕಂಗಾಲಾಗಿರುವ ಮಿತ್ರ ಪಕ್ಷ  ಬಿಜೆಪಿ, ದೆಹಲಿಯಲ್ಲಿ ಸರಣಿ ಸಭೆಗಳನ್ನು ನಡೆಸಿ ಬಿಕ್ಕಟ್ಟಿನಿಂದ ಹೊರಬರುವ ಮಾರ್ಗಕ್ಕಾಗಿ ತಡಕಾಡುತ್ತಿದೆ.

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

ಮುಗಿಯದ ‘ಮಹಾ ನಾಟಕ’ : ಎನ್‌ಸಿಪಿ ಮುಖ್ಯಸ್ಥ ‘ನಿಗೂಢ ಹೇಳಿಕೆ’

Follow Us:
Download App:
  • android
  • ios