Asianet Suvarna News Asianet Suvarna News

ದೂರವಾಗಿರುವ ಪ್ರಮುಖ ಪಕ್ಷ ಮತ್ತೆ ಬಿಜೆಪಿ ಜತೆಗೆ..ಕಂಡಿಶನ್ ಏನು?

ಮುಂದಿನ ಲೋಕಸಭಾ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಎನ್‌ಡಿಎ ಒಕ್ಕೂಟಕ್ಕೆ ಎದುರಾಗಿ ಮಹಾಘಟಬಂಧನ್ ಮಾಡಿಕೊಳ್ಳುವ ಪ್ರಕ್ರಿಯೆಯೂ ನಿಧಾನವಾಗಿ ಚಾಲನೆಯಲ್ಲಿದೆ. ಆದರೆ ಬಿಜೆಪಿ ಮತ್ತು ಎನ್‌ಡಿಎ ಒಕ್ಕೂಟದಿಂದ ದೂರವಾಗಿರುವ ಪ್ರಮುಖ ಪಕ್ಷವೊಂದು ಮತ್ತೆ ಎನ್‌ಡಿಎ ಜತೆ ಬರಲು ಸಿದ್ಧವಾಗಿದೆ.

Shiv Sena agrees to alliance with BJP for Maharashtra assembly polls but has two conditions
Author
Bengaluru, First Published Dec 19, 2018, 9:13 PM IST

ನವದೆಹಲಿ[ಡಿ.19] ಬಿಜೆಪಿಯಿಂದ ದೂರವಾಗಿರುವ ಹಳೆ ಸ್ನೇಹಿತ ಶಿವಸೇನೆ ಮತ್ತೆ ಕಮಲದ ಜತೆ ಹೆಜ್ಜೆ ಹಾಕಲು ಸಿದ್ಧವಾಗಿದೆ. ಆದರೆ ಎರಡು ಕಂಡಿಶನ್‌ಗಳನ್ನು ಹಾಕಿದೆ.

20196ರಲ್ಲಿಯೇ ನಡೆಯಲಿರುವ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆ  288ರಲ್ಲಿ 155 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಬಯಸುತ್ತಿದೆ. ಇದಕ್ಕೆ ಬಿಜೆಪಿ ಒಪ್ಪಿಕೊಂಡರೆ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು.

ಬಿಜೆಪಿ ಮತ್ತು ಶಿವಸೇನೆ ಈ ವರ್ಷದ ಆರಂಭದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಎರಡು ಕಡೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಕೆಲ ಕಾರಣಗಳಿಂದ ದೂರ ಆಗಿದ್ದವು. 

ಧೂಳೆಬ್ಬಿಸಿದ ಬಿಜೆಪಿ: 3+2=5 ಮತ್ತೆ ಕಮಲ ತೆಕ್ಕೆಗೆ?

ಮಹಾರಾಷ್ಟ್ರದ ಅಸೆಂಬ್ಲಿಯಲ್ಲಿ ಬಿಜೆಪಿ 121 ಸ್ಥಾನಗಳನ್ನು ಗೆದ್ದಿದ್ದರೆ ಶಿವಸೇನೆ ಬಲ 63.  ಮೂಲಗಳು ಹೇಳುವ ಪ್ರಕಾರ ಮುಂದಿನ ಸಾರಿ ಬಿಜೆಪಿ ಶಿವಸೇನೆಗೆ 138 ಸೀಟು ಬಿಟ್ಟುಕೊಡಲು ಸಿದ್ಧವಿದೆ. ಆದರೆ 150 ಸ್ಥಾನಗಳಲ್ಲಿ ತಾನೇ ಸ್ಪರ್ಧೆ ಮಾಡಬೇಕು ಎಂದು ಬಯಸುತ್ತಿದೆ. ಮೂರು ರಾಜ್ಯಗಳ ಸೋಲಿನ ನಂತರ ಬಿಜೆಪಿಯೂ ಸಹ ದೋಸ್ತಿ  ಮಾಡಿಕೊಳ್ಳುವುದೇ ಉತ್ತಮ ಎಂದು ಬಯಸುತ್ತಿದೆ. ಆದರೆ ಮತ್ತೆ ಒಂದಾಗಲು ಎರಡು ಪಕ್ಷಗಳ ಪ್ರಮುಖ ನಾಯಕರು ಒಪ್ಪಬೇಕಾಗುತ್ತದೆ.

Follow Us:
Download App:
  • android
  • ios