ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಶಶಿಕಲಾ ನಟರಾಜನ್  ಕನ್ನಡ ಕಲಿಕೆ ಕೋರ್ಸ್‌ಗೆ ಅರ್ಜಿ ಹಾಕಿದ್ದಾರೆ.  

ಬೆಂಗಳೂರು (ಅ. 26): ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ರಾಜಕೀಯ ನಾಯಕಿ ಶಶಿಕಲಾ ನಟರಾಜನ್ ಅವರು ಈಗ ಕನ್ನಡ ಭಾಷಾ ಕಲಿಕೆಯ 1 ವರ್ಷದ ಕೋರ್ಸ್‌ಗೆ ಅರ್ಜಿ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಬೆಂಗಳೂರು ವಿವಿ ದೂರಶಿಕ್ಷಣ ಕೇಂದ್ರವು ಪರಪ್ಪನ ಅಗ್ರಹಾರ ಕಾರಾಗೃಹದ ಅನ್ಯ ಭಾಷಿಕ ಸಜಾ ಬಂಧಿಗಳಿಗೆ ಭಾಷೆ ಕಲಿಕೆಗೆ ಆರು ಮತ್ತು ಒಂದು ವರ್ಷದ ಕೋರ್ಸ್ ನಡೆಸುತ್ತಿದೆ. ಈಗ ಸಜಾ ಬಂಧಿಯಾಗಿರುವ ಶಶಿಕಲಾ ಅವರು ಕನ್ನಡ ಭಾಷೆ ಕಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕಾರಾಗೃಹದ ಅಧೀಕ್ಷಕ ರಮೇಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.