ಮಾಧ್ಯಮಗಳು ವಿವಿಧ ಭಾಷೆಯ ಜನರನ್ನು ಹತ್ತಿರಕ್ಕೆ ತರುವ ಸೇತುವೆ| ನಿತ್ಯ ಬೇರೆ ಭಾಷೆಯ ಒಂದೊಂದು ಪದ ಕಲಿಯಿರಿ ಪ್ರಧಾನಿ ನರೇಂದ್ರ ಮೋದಿ ಕರೆ| ಮತ್ತೆ ಮೋದಿ ಕರೆಗೆ ಸ್ಪಂದಿಸಿದ ತರೂರ್‌

ನವದೆಹಲಿ[ಆ.31]: ದೇಶದ ಐಕ್ಯತೆಗಾಗಿ ಜನತೆ ದಿನ ನಿತ್ಯದ ಸಂವಹನಕ್ಕಾಗಿ ಬಳಸುವ ಭಾಷೆಯನ್ನೇ ವಾಹಕವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿದ್ದಾರೆ. ಆದರೂ ಭಾಷೆಗಳನ್ನು ಕೆಲವು ಸ್ವಾರ್ಥಸಾಧಕ ಹಿತಾಸಕ್ತಿಗಳು ದೇಶ ವಿಭಜನೆಗೆ ಬಳಸಿಕೊಂಡಿದ್ದವು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮತ ಹೆಚ್ಚಿಸಲು ಮೋದಿ ಏನು ಮಾಡಿದ್ರು ಎಂದು ಮೊದಲು ತಿಳ್ಕೊಳ್ಳಿ: ತರೂರ್‌ ಸಲಹೆ!

ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ಮಲಯಾಳ ಮನೋರಮಾದ ನ್ಯೂಸ್‌ ಕಾನ್ಫರೆನ್ಸ್‌ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಮೋದಿ, ಮಾಧ್ಯಮಗಳು ವಿವಿಧ ಭಾಷೆಯ ಜನರನ್ನು ಹತ್ತಿರಕ್ಕೆ ತರುವ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು. ಇದಕ್ಕಾಗಿ ಹೆಚ್ಚೇನು ಕಷ್ಟಪಡಬೇಕಿಲ್ಲ. ನಾವು ದೇಶದ 10-12 ಭಾಷೆಗಳ ಒಂದು ಪದವನ್ನು ಬಳಕೆ ಮಾಡಿದರೆ ಸಾಕು. ಒಂದು ವರ್ಷದಲ್ಲಿ ವ್ಯಕ್ತಿಯೋರ್ವ ವಿವಿಧ ಭಾಷೆಗಳ 300 ಪದಗಳನ್ನು ಕಲಿಯಬಹುದು. ಇದರಿಂದ ಹರಾರ‍ಯಣದ ನಾಗರಿಕರು ಮಲಯಾಳಂ, ಕರ್ನಾಟಕದಲ್ಲಿರುವವರು ಬಾಂಗ್ಲಾ ಕಲಿಯಬಹುದು ಎಂದು ಹೇಳಿದರು.

ಮೋದಿ ಹೊಗಳಿದ ತರೂರ್‌ಗೆ ಕಾಂಗ್ರೆಸ್‌ ನೋಟಿಸ್‌!

ಮತ್ತೆ ಮೋದಿ ಕರೆಗೆ ಸ್ಪಂದಿಸಿದ ತರೂರ್‌

ಪ್ರತಿಯೊಬ್ಬರೂ, ಪ್ರತಿದಿನ ಬೇರೆ ಭಾಷೆಯ ಒಂದೊಂದು ಪದ ಕಲಿಯಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಸಲಹೆಗೆ, ಮೊದಲ ದಿನವೇ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸ್ಪಂದಿಸಿದ್ದಾರೆ. ಹಿಂದಿ ಹೇರಿಕೆಯ ವಿರುದ್ಧ ಪ್ರಧಾನಿಯವರ ಈ ನಿಲುವನ್ನು ನಾನು ಸ್ವಾಗತಿಸುತ್ತೇನೆ. ಪ್ರಧಾನಿ ನೀಡಿದ ಭಾಷಾ ಚಾಲೆಂಜ್‌ ಅನ್ನು ನಾನು ಸ್ವೀಕರಿಸುತ್ತೇನೆ ಎಂದು ಶಶಿ ತರೂರ್‌ ಅದೇ ಸಮಾವೇಶದಲ್ಲಿ ಪ್ರಧಾನಿ ನೀಡಿದ ಭಾಷಾ ಚಾಲೆಂಜ್‌ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

Scroll to load tweet…
Scroll to load tweet…

ಅಲ್ಲದೇ ಮತ್ತೊಂದು ಟ್ವೀಟ್‌ನಲ್ಲಿ ಇಂಗ್ಲೀಷ್‌ನ Pluralism ಎನ್ನುವ ಪದ ಹಾಗೂ ಅದರ ಹಿಂದಿ ಅರ್ಥ ಬಹುಲವಾದ್‌ ಮತ್ತು ಮಲಯಾಳಂ ಅರ್ಥ ಬಹುವಚನಂ ಎಂದು ಬರೆದುಕೊಂಡಿದ್ದಾರೆ. ಆದರೆ ತರೂರ್‌ ಪ್ಲೂರಲಿಸಂ ಎಂದು ಇಂಗ್ಲೀಷ್‌ನಲ್ಲಿ ಬಳಸಿರುವ ಪದಕ್ಕೆ ಮಲಯಾಳಂನಲ್ಲಿ ಬಹುವಚನಂ ಎಂದು ಅರ್ಥ ನೀಡಿದ್ದಾರೆ. ವಾಸ್ತವವಾಗಿ ಪ್ಲೂರಲಿಸಂ ಪದಕ್ಕೆ ಬಹುತ್ವವಾದ ಎಂಬ ಅರ್ಥವಿದೆ. ಹೀಗಾಗಿ ಈ ಪದವನ್ನು ಮೋದಿಗೆ ಟಾಂಗ್‌ ನೀಡಲೂ ತರೂರ್‌ ಬಳಸಿರಬಹುದು ಎಂಬ ವಾದಗಳೂ ಕೇಳಿಬಂದಿವೆ.

ಮೋದಿ ಹೊಗಳಿದ ಜೈರಾಂಗೆ ಸಿಂಘ್ವಿ, ತರೂರ್‌ ಬೆಂಬಲ!