ನವದೆಹಲಿ[ಆ.24]: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತವು ಸಂಪೂರ್ಣ ಋುಣಾತ್ಮಕವಾಗಿಲ್ಲ. ಪ್ರತಿಯೊಂದಕ್ಕೂ ಮೋದಿ ಅವರನ್ನು ಟೀಕಿಸುವುದು ಸರಿಯಲ್ಲ. ಅವರ ಉತ್ತಮ ಕಾರ್ಯ ವೈಖರಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಬೇಕೆಂಬ ಕರ್ನಾಟಕದ ರಾಜ್ಯಸಭೆ ಸದಸ್ಯ ಹಾಗೂ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅವರ ಹೇಳಿಕೆಯನ್ನು ಕಾಂಗ್ರೆಸ್‌ನ ಇತರ ಇಬ್ಬರು ಮುಖಂಡರು ಸಮರ್ಥಿಸಿದ್ದಾರೆ.

ಮೋದಿ ಜನರ ಪ್ರಧಾನಿ: ಬದಲಾಗ್ತಿದೆ ಕೈ ನಾಯಕರ ಧ್ವನಿ!

ಪ್ರಧಾನಿ ಮೋದಿ ಅವರು ಕೈಗೊಳ್ಳುವ ವಿಚಾರಗಳಿಗನುಸಾರವಾಗಿ ಟೀಕೆ- ಟಿಪ್ಪಣಿ ಮಾಡಬೇಕೇ ಹೊರತು, ವ್ಯಕ್ತಿಯಾಧಾರಿತ ಟೀಕೆ ತಪ್ಪು ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನುಸಿಂಘ್ವಿ ಹೇಳಿದರೆ, ಉತ್ತಮ ಕ್ರಮ ಕೈಗೊಳ್ಳುವ ಬಗ್ಗೆ ಪ್ರಧಾನಿ ಅವರನ್ನು ಶ್ಲಾಘಿಸಿದರೆ, ಪ್ರತಿಪಕ್ಷಗಳ ಘನತೆ ಹೆಚ್ಚುತ್ತದೆ. ಅಲ್ಲದೆ, ಪ್ರತಿಪಕ್ಷಗಳ ವಿಮರ್ಶೆಗೆ ಮಹತ್ವ ಹೆಚ್ಚುತ್ತದೆ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದರು.