ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಸೀಕ್ರೆಟ್ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.
ಬೆಂಗಳೂರು(ಸೆ.25): ಇಡೀ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದ ಐಟಿ ಅಧಿಕಾರಿ ಪುತ್ರ ಶರತ್ ಕೊಲೆ ಸೀಕ್ರೆಟ್ ಔಟಾಗಿದೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್ ಹತ್ಯೆಯ ಹಿಂದಿನ ಕರಾಳ ಸತ್ಯಗಳನ್ನ ಹೊರ ಹಾಕಿದ್ದಾರೆ.
ಶರತ್ ಹತ್ಯೆಗೆ ಹಂತಕರು ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ರು. ಈ ಕಟು ಸತ್ಯವನ್ನ ಕೊಲೆಗಡುಕ ವಿಶಾಲ್ ಹಾಗೂ ಆತನ ತಂಡದವರು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಶರತ್ ನನ್ನ ಕಿಡ್ನಾಪ್ ಮಾಡಲು ವಿಶಾಲ್ ಅಂಡ್ ಟೀಂ ತಿಂಗಳ ಹಿಂದೆಯೇ ಬಾರ್ನಲ್ಲಿ ಎರಡು ಬಾರಿ ಮೀಟಿಂಗ್ ನಡೆಸಿದ್ದಾರೆ. ಶರತ್ ನನ್ನ ಕಿಡ್ನಾಪ್ ಮಾಡಿದ್ದ ದಿನವೇ ಕಿಡ್ನಾರ್ಪಾಸ್ ಶರತ್ನ ತಂದೆ ಮತ್ತು ಅಕ್ಕನ ಮೊಬೈಲ್ ಗೆ ಮೆಸೇಜ್ ಕಳುಹಿಸಿ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ರು. ತಕ್ಷಣ ಶರತ್ ತಂದೆ ನಿರಂಜನ್ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.
ಕೇಸ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ತಂತೆ ಕಿಡ್ನಾಪ್ ಮಾಸ್ಟರ್ ಮೈಂಡ್ ವಿಶಾಲ್ ತನ್ನ ಟೀಂ ಗೆ ಶರತ್ನನ್ನು ಕೊಲೆ ಮಾಡುವಂತೆ ತಿಳಿಸಿದ್ದಾನೆ. ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್ ಮೊಬೈಲ್ನಿಂದ 10 ಲಕ್ಷ ಕೋಡುತ್ತೇವೆ ಬಿಟ್ಟುಬಿಡಿ ಎಂದು ಮೇಸೆಜ್ ಕಳಿಸಿದ್ದಾರೆ. ಆದ್ರೆ ಪೊಲೀಸರ ಮೇಸೆಜ್ ಹಂತಕರಿಗೆ ತಲುಪವಷ್ಟರಲ್ಲೇ ಶರತ್ ಕೊಲೆಯಾಗಿತ್ತು.
