ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರೇ ದಿನಗಳಲ್ಲಿ ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್‌ಎಸ್‌ಎಸ್‌ಗೆ ಇದೆ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿಕೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿ : ಅಗತ್ಯ ಬಿದ್ದರೆ, ದೇಶದ ರಕ್ಷಣೆಗಾಗಿ ಕೇವಲ ಮೂರೇ ದಿನಗಳಲ್ಲಿ ದಿನಗಳಲ್ಲಿ ಕಾರ್ಯಕರ್ತರನ್ನು ಸೇನೆಯಂತೆ ಸಜ್ಜುಗೊಳಿಸುವ ಸಾಮರ್ಥ್ಯ ಆರ್ಎಸ್ಎಸ್ಗೆ ಇದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಇಂತಹ ಹೇಳಿಕೆ ನೀಡುವ ನಿಮಗೆ ನಾಚಿಕೆಯಾಗುವುದಿಲ್ಲವೇ. ಈ ರೀತಿಯಾಗಿ ನೀವು ಮಾತನಾಡಿರುವುದು ಪ್ರತೀ ಭಾರತೀಯರಿಗೂ ಅವಮಾನ ಮಾಡಿದಂತೆ ಎಂದು ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಇದು ನಮ್ಮನ್ನು ಕಾಯುವ ಸೈನಿಕರಿಗೂ ಮಾಡಿರುವ ಅಪಮಾನ ಎಂದು ರಾಹುಲ್ ಹೇಳಿದ್ದಾರೆ.
ನಾವೆಲ್ಲರೂ ಎಂದಿಗೂ ಸೆಲ್ಯೂಟ್ ಮಾಡುವ ಹುತಾತ್ಮತ ಯೋಧರಿಗೆ ಆರ್’ಎಸ್ಎಸ್ ಮುಖಂಡ ಭಾಗವತ್ ಅವರ ಹೇಳಿಕೆ ಅಗೌರವವನ್ನು ಉಂಟು ಮಾಡಿದೆ ಎಂದು ಅವರು ಹೇಳಿದ್ದಾರೆ.
