ಲಖನೌ(ಆ.15): ಕರ್ನಾಟಕದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ನವೀನ್‌ ತಲೆ ತಂದವರಿಗೆ 51 ಲಕ್ಷ ರು. ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಮಾಜವಾದಿ ಪಕ್ಷದ ಮಾಜಿ ಮುಖಂಡ ಶಾಜೇಬ್‌ ರಿಜ್ವಿಯನ್ನು ಉತ್ತರ ಪ್ರದೇಶದ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ನವೀನ್‌ ತಲೆ ತಂದವರಿಗೆ 51 ಲಕ್ಷ ರು. ನೀಡುವುದಾಗಿ ರಿಜ್ವಿ ಹೇಳಿಕೆ ನೀಡಿದ್ದ ವಿಡಿಯೋ ವೈರಲ್‌ ಆಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. 

'ಅಖಂಡ ಸಂಬಂಧಿ ನವೀನ್ ತಲೆ ತಂದವರಿಗೆ ಅರ್ಧ ಕೋಟಿ'

ಈ ಮಧ್ಯೆ ಬಹುಮಾನದ ಹಣಕ್ಕಾಗಿ ರಿಜ್ವಿ ಜನರಿಂದ ಹಣವನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದ. ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ರಿಜ್ವಿ ತಲೆ ಮರೆಸಿಕೊಂಡಿದ್ದ. ಮೇರಠ್‌ನಲ್ಲಿ ರಿಜ್ವಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.