ಲಕ್ನೋ(ಆ. 13) ಸೋಶಿಯಲ್ ಮೀಡಿಯಾ ಪೋಸ್ಟ್ ಒಂದನ್ನು ನೆಪವಾಗಿರಿಸಿಕೊಂಡು ಬೆಂಗಳೂರಿನಲ್ಲಿ ಗಲಭೆಯಾಗಿದ್ದು ಗೊತ್ತೆ ಇದೆ.  ಇದೀಗ ಉತ್ತರ ಪ್ರದೇಶದ ಮೀರತ್ ನ ಮುಸ್ಲಿಂ ನಾಯಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಎನ್ನಲಾದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅಕ್ಕನ ಮಗನ ತಲೆ ತಂದರೆ  51  ಲಕ್ಷ ರೂ. ನೀಡುತ್ತೇನೆ  ಎಂದು ಘೋಷಣೆ ಮಾಡಿದ್ದಾರೆ.

"

ಮುಸ್ಲಿಂ ಮುಖಂಡ ಶಜೇಬ್ ರಿಜ್ವಿ , ನಾನು  ಈ ಘಟನೆಯನ್ನು ಖಂಡಿಸುತ್ತೇನೆ, ನವೀನ್ ತಲೆ ತಂದವರಿಗೆ ಬಹುಮಾನ ನೀಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.

ಗಲಭೆಗೆ ನವೀನ್ ಪೋಸ್ಟ್  ಒಂದು ನೆಪ ಮಾತ್ರ

ಹಿಂದೆ ಸಮಾಜವಾದಿ ಪಕ್ಷದ ನಾಯಕರಾಗಿದ್ದ ರಿಜ್ವಿ ಈಗ ರಾಜಕಾರಣದಿಂದ ದೂರ ಇದ್ದಾರೆ. ಸಮಾಜವಾದಿ ಪಕ್ಷದ ಅಲ್ಪಸಂಖ್ಯಾತ ಘಟಕದ ಉತ್ತರ ಪ್ರದೇಶ ರಾಜ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. 

ಪಕ್ಷ ತೊರೆದ ಮೇಲೆ ತನ್ನನ್ನು ತಾನು ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ.  ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶ ನೀಡಲಾಗಿದೆ.