ಭಯೋತ್ಪಾದನೆ ಸೃಷ್ಟಿ, ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ ದೊರೆತಿದೆ.

ನವದೆಹಲಿ (ನ.24): ಭಯೋತ್ಪಾದನೆ ಸೃಷ್ಟಿ, ಹಾಗೂ ಉಗ್ರರಿಗೆ ಕುಮ್ಮಕ್ಕು ನೀಡುವ ಪಾಕಿಸ್ತಾನದ ಕೈವಾಡಕ್ಕೆ ಮತ್ತೊಂದು ಸಾಕ್ಷ್ಯ ದೊರೆತಿದೆ.

ವಿಚಾರಣೆ ವೇಳೆ ಎಲ್​'ಇಟಿ ಉಗ್ರ ಶಹಾಬುದ್ದೀನ್ ತಪ್ಪೊಪ್ಪಿಕೊಂಡಿದ್ದಾನೆ. ಸುಮಾರು 200 ನಿಮಿಷಗಳ ವಿಡಿಯೋದಲ್ಲಿ ಉಗ್ರ ಹಫೀಜ್ ಸಯೀದ್ ತರಬೇತಿ ನೀಡುತ್ತಿದ್ದ ವಿವರ, ಉಗ್ರ ಶಹಾಬುದ್ದೀನ್ ಹೇಳಿಕೆಯಿಂದಾಗಿ ಬಹಿರಂಗವಾಗಿದೆ. ಭಾರತಕ್ಕೆ ಕಳುಹಿಸುವ ಉಗ್ರರಿಗೆ ಪಾಕ್ ಮಿಲಿಟರಿ ಹಾಗೂ ಐಎಸ್​ಐ ತರಬೇತಿ ನೀಡುತ್ತಿದ್ದ ವಿವರ, ನಾಲ್ವರು ಮಿಲಿಟರಿ ಅಧಿಕಾರಿಗಳಾದ ಸುಬೇದಾರ್ ಬಾಬರ್, ಕ್ಯಾ.ಮಲಿಕ್, ಕರ್ನಲ್ ಕಲ್ಯಾಣಿ, ಮೇ. ದೊಗರ್ ಹೆಸರು, ಐಎಸ್​ಐ ಮುಖ್ಯಸ್ಥರ ಜೊತೆ ಉಗ್ರ ಹಫೀಜ್ ಸಯೀದ್ ಭೇಟಿ, ಐಎಸ್​ಐನಿಂದ ಉಗ್ರ ಹಫೀಜ್ ಸಯೀದ್​ಗೆ ಮಾರ್ಗದರ್ಶನ, ಝಖೀ ಉರ್ ರೆಹಮಾನ್ ಜೊತೆಗೂ ಮಿಲಿಟರಿ-ಐಎಸ್​ಐ ಲಿಂಕ್, ಪಾಕ್ ಸರ್ಕಾರದಿಂದಲೇ ಉಗ್ರರಿಗೆ ಹಣ, ಶಸ್ತ್ರಾಸ್ತ್ರ ಪೂರೈಕೆ, ಪಾಕ್ ಪ್ರಾಯೋಜಿತ ಭಯೋತ್ಪಾದನೆ ವಿವರಗಳನ್ನ ಉಗ್ರ ಶಹಾಬುದ್ದೀನ್ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದಾನೆ. ಉಗ್ರ ಹಫೀಜ್ ಸಯೀದ್ ಗೃಹಬಂಧನ ಮುಕ್ತಾಯವಾದ ಬೆನ್ನಲ್ಲೇ ಈ ವಿಡಿಯೋ ಬಹಿರಂಗವಾಗಿದೆ. ಇದರಿಂದಾಗಿ ಹಪೀಜ್ ಸಯೀದ್ ವಿರುದ್ಧ ಸಾಕ್ಷಗಳನ್ನೇ ಕೊಡದೇ ಆಟವಾಡಿದ್ದ ಪಾಕ್ ಸರ್ಕಾರದ ನರಿಬುದ್ಧಿ ಮತ್ತೊಮ್ಮೆ ಬಯಲಾಗಿದೆ.