ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಸಿನಿಮಾ 'ಜಬ್ ಹ್ಯಾರಿ ಮೆಟ್ ಸೆಜಲ್'ನ ಪ್ರಚಾರಕ್ಕಾಗಿ ಪ್ರಖ್ಯಾತ ಹಿಂದಿ ಹಾಸ್ಯ ಕಾರ್ಯಕ್ರಮ 'ದ ಕಪಿಲ್ ಶರ್ಮಾ ಶೋ' ಸೆಟ್'ಗೆ ಆಗಮಿಸಿದ ಶಾರುಖ್ ಹಾಗೂ ಅನುಷ್ಕಾ ಶೂಟಿಂಗ್ ಮಾಡದೆಯೇ ಮರಳಿದ ಘಟನೆ ನಡೆದಿದೆ. ಅಷಚ್ಟಕ್ಕೂ ಸೆಟ್'ಗೆ ಆಗಮಿಸಿದ ಈ ಬಾಲಿವುಡ್ ಗಣ್ಯರು ಶೂಟಿಂಗ್ ಮಾಡದೆಯೇ ಹಿಂತಿರುಗಿದ್ದೇಕೆ ಅಂತೀರಾ? ಇಲ್ಲಿದೆ ವಿವರ

ಮುಂಬೈ(ಜು.09): ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಸಿನಿಮಾ 'ಜಬ್ ಹ್ಯಾರಿ ಮೆಟ್ ಸೆಜಲ್'ನ ಪ್ರಚಾರಕ್ಕಾಗಿ ಪ್ರಖ್ಯಾತ ಹಿಂದಿ ಹಾಸ್ಯ ಕಾರ್ಯಕ್ರಮ 'ದ ಕಪಿಲ್ ಶರ್ಮಾ ಶೋ' ಸೆಟ್'ಗೆ ಆಗಮಿಸಿದ ಶಾರುಖ್ ಹಾಗೂ ಅನುಷ್ಕಾ ಶೂಟಿಂಗ್ ಮಾಡದೆಯೇ ಮರಳಿದ ಘಟನೆ ನಡೆದಿದೆ. ಅಷಚ್ಟಕ್ಕೂ ಸೆಟ್'ಗೆ ಆಗಮಿಸಿದ ಈ ಬಾಲಿವುಡ್ ಗಣ್ಯರು ಶೂಟಿಂಗ್ ಮಾಡದೆಯೇ ಹಿಂತಿರುಗಿದ್ದೇಕೆ ಅಂತೀರಾ? ಇಲ್ಲಿದೆ ವಿವರ

ಈ ಕುರಿತಾಗಿ 'ಹಿಂದೂಸ್ಥಾನ್ ಟೈಮ್ಸ್' ವರದಿ ಮಾಡಿದ್ದು, ಶುಕ್ರವಾರದಂದು ರಾತ್ರಿ ಕಪಿಲ್ ಶರ್ಮಾಗೆ, ಶಾರುಖ್ ಹಾಗೂ ಅನುಷ್ಕಾ ಶರ್ಮಾರೊಂದಿಗೆ 'ಹ್ಯಾರಿ ಮೆಟ್ ಸೆಜಲ್' ಸಿನಿಮಾ ಪ್ರಚಾರದ ಎಪಿಸೋಡ್ ಶೂಟ್ ಮಾಡಬೇಕಿತ್ತು. ಆದರೆ ಅವರು ಸೆಟ್'ನಲ್ಲಿ ಪ್ರಜ್ಞಾಹೀನರಾಗಿದ್ದಾರೆ. ಶೋ ಟಿಆರ್'ಪಿ ಹೆಚ್ಚಿಸಲು ಕಪಿಲ್ ಶರ್ಮಾ ಕಳೆದ ಕೆಲ ದಿನಗಳಿಂದ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಹುಶಃ ಇದೇ ಕಾರಣದಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ 'ಗೆಸ್ಟ್ ಇನ್ ಲಂಡನ್' ಸಿನಿಮಾ ಪ್ರಚಾರದ ಎಪಿಸೋಡ್ ಶೂಟಿಂಗ್'ಗಾಗಿ ಸಿನಿಮಾ ತಂಡ ಆಗಮಿಸಿದಾಗಲೂ ಕಪಿಲ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಶೂಟಿಂಗ್ ಕ್ಯಾನ್ಸಲ್ ಮಾಡಬೇಕಾಯ್ತು. ಕಪಿಲ್ ಶೋ ಕಾರ್ಯಕ್ರಮದ ಟಿಆರ್'ಪಿ ಗಣನೀಯವಾಗಿ ಕುಸಿತ ಕಂಡಿದೆ ಅಲ್ಲದೆ ಕಾಮಿಡಿಯನ್ ಕೃಷ್ಣಾ ಕೂಡಾ ಇದೇ ವಾಹಿನಿಯಲ್ಲಿ ಮತ್ತೊಂದು ಶೋ ಆರಂಭಿಸಲಿದ್ದಾರೆ. ಅಲ್ಲದೇ ಕಪಿಲ್ ತಂಡದಲ್ಲಿದ್ದ ಇಬ್ಬರು ಪ್ರಮುಖರು ಕೃಷ್ಣಾ ತಮಡವನ್ನು ಸೇರಿಕೊಂಡಿದ್ದಾರೆ ಇದೇ ಕಾರಣದಿಂದ ಕಪಿಲ್ ಶರ್ಮಾ ಇಷ್ಟೊಂದು ಒತ್ತಡಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಅದೇನಿದ್ದರೂ ಅಂದು ವಿಮಾನದಲ್ಲಿ ಮಶೂರ್ ಗುಲಾಟಿಯೊಂದಿಗೆ ಕಪಿಲ್ ವರ್ತಿಸಿದ ರೀತಿ, ಬಳಿಕ ಕಪಿಲ್ ಶರ್ಮಾ ಶೋದಿಂದಲೇ ನಟ ಗುಲಾಟಿಯ ನಿರ್ಗಮನ ಕಪಿಲ್ ಶರ್ಮಾ ಶೋ ಟಿಆರ್'ಪಿ ಕುಸಿತ ಕಾಣಲು ಕಾರಣವೆಂಬ ಮಾತುಗಳು ದಟ್ಟವಾಗಿವೆ.