ಇಂದಿರಾ ಕ್ಯಾಂಟೀನ್ ಮೇಲಾಧಿಕಾರಿಯೋರ್ವರು ಕ್ಯಾಶಿಯರ್’ಗೆ ಕಿರುಕುಳ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸತೀಶ್ ಎಂಬ ಮೇಲಾಧಿಕಾರಿ ತಮಗೆ  ಕಿರುಕುಳ ನೀಡುತ್ತಿದ್ದುದಾಗಿ ಆರೋಪ ಮಾಡಿದ್ದಾರೆ.

ಬೆಂಗಳೂರು(ಜ.06) : ಇಂದಿರಾ ಕ್ಯಾಂಟೀನ್ ಮೇಲಾಧಿಕಾರಿಯೋರ್ವರು ಕ್ಯಾಶಿಯರ್’ಗೆ ಕಿರುಕುಳ ನೀಡಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಸತೀಶ್ ಎಂಬ ಮೇಲಾಧಿಕಾರಿ ತಮಗೆ ಕಿರುಕುಳ ನೀಡುತ್ತಿದ್ದುದಾಗಿ ಮಹಿಳಾ ಕ್ಯಾಶಿಯರ್ ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಂಬಂಧ ಮಹಿಳೆಯು ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಲಸದಲ್ಲಿ ಮುಂದುವರಿಯಬೇಕಾದರೆ ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಮೇಲಾಧಿಕಾರಿ ಸತೀಶ್ ಮಾನಸಿಕ ಹಾಗೂ ದೈಹಿಕವಾಗಿ ನಿರಂತರವಾಗಿ ತಮಗೆ ಕಿರುಕುಳ ನೀಡುತ್ತಿದ್ದಾರೆ. ರಾತ್ರಿ ವೇಳೆ ತಮಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಪೊಲೀಸರು ಮೇಲಾಧಿಕಾರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.