ಮಾರುತಿ ಗೌಡ ಮೇಲೆ ಹಲ್ಲೆ ಆರೋಪದಡಿ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಮತ್ತು ಸಹಚರರಿಗೆ ಮತ್ತೆ ಜೈಲೇ ಗತಿಯಾಗಿದೆ. 

ಬೆಂಗಳೂರು, ಸೆ.29: ಮಾರುತಿ ಗೌಡ ಮೇಲೆ ಹಲ್ಲೆ ಆರೋಪದಡಿ ಬಂಧನದಲ್ಲಿರುವ ನಟ ದುನಿಯಾ ವಿಜಯ್ ಮತ್ತು ಸಹಚರರಿಗೆ ಮತ್ತೆ ಜೈಲೇ ಗತಿಯಾಗಿದೆ.

ಇಂದು ಸಿಟಿ ಸೆಷನ್ಸ್ ಕೋರ್ಟ್ ನಲ್ಲಿ ನಡೆದ ಜಾಮೀನು ಅರ್ಜಿ ನಡೆಸಿದ್ದು, ಆದೇಶವನ್ನು ಅಕ್ಟೋಬರ್ 2ಕ್ಕೆ ಮುಂದೂಡಿದೆ. ಇದ್ರಿಂದ ಸೋಮವಾರದ ತನಕ ದುನಿಯಾ ವಿಜಿ ಮತ್ತು ಗ್ಯಾಂಗ್ ಗೆ ಪರಪ್ಪನ ಅಗ್ರಹಾರವೇ ಗತಿ. 

ದುನಿಯಾ ವಿಜಿ ಕೇಸ್ : ಪಾನಿಪೂರಿ ಕಿಟ್ಟಿ ಬಿಚ್ಚಿಟ್ಟ ಸತ್ಯವಿದು?

 ಮೊನ್ನೇ ಅಷ್ಟೇ ಎಎಂಸಿಸಿ ನ್ಯಾಯಾಲಯ ದುನಿಯಾ ವಿಜಿಗೆ ಜಾಮೀನು ನೀಡಲು ನಿರಾಕರಿಸಿತ್ತು. ಈ ಹಿನ್ನೆಲೆ ವಿಜಿ ಪರ ವಕೀಲರು ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದರು. ಒಂದು ವೇಳೆ ಅಕ್ಟೋಬರ್ 1ರಂದು ಜಾಮೀನು ಸಿಗಲದೇ ಇದ್ದಲ್ಲಿ ದುನಿಯಾ ವಿಜಿ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. 

ದುನಿಯಾ ವಿಜಯ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ