ಮಿಳುನಾಡು ಹಣಕಾಸು ಸಚಿವ ಒ. ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಿನ್ನೆ ಮೊದಲ ಬಾರಿಗೆ ಸಂಪುಟ ಸಭೆ ನಡೆಯಿತು. ಕಾವೇರಿ ವಿವಾದ ಸೇರಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆದ್ರೆ, ಸಿಎಂ ಜಯಲಲಿತಾ ಫೋಟೋ ಇರಿಸಿಕೊಂಡು ಸಭೆ ನಡೆಸಿದ್ದು ವಿಶೇಷವಾಗಿತ್ತು.
ಚೆನ್ನೈ(ಅ.20): ತಮಿಳುನಾಡು ಹಣಕಾಸು ಸಚಿವ ಒ. ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ನಿನ್ನೆ ಮೊದಲ ಬಾರಿಗೆ ಸಂಪುಟ ಸಭೆ ನಡೆಯಿತು. ಕಾವೇರಿ ವಿವಾದ ಸೇರಿ ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆದ್ರೆ, ಸಿಎಂ ಜಯಲಲಿತಾ ಫೋಟೋ ಇರಿಸಿಕೊಂಡು ಸಭೆ ನಡೆಸಿದ್ದು ವಿಶೇಷವಾಗಿತ್ತು.
ಮುಖ್ಯಮಂತ್ರಿ ಜಯಲಲಿತಾ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರು ಹೊಂದಿದ್ದ ಖಾತೆಗಳನ್ನು ಪನ್ನೀರ್‌ಸೆಲ್ವಂ ಅವರಿಗೆ ವಹಿಸಲಾಗಿದೆ. ಹಾಗೆಯೇ ಸಂಪುಟ ಸಭೆ ನಡೆಸುವ ಅಧಿಕಾರವನ್ನೂ ಅವರಿಗೆ ರಾಜ್ಯಪಾಲರು ವಹಿಸಿದ್ದಾರೆ. ಹೀಗಾಗಿ ನಿನ್ನೆ ಸಂಪುಟ ಸಭೆ ನಡೆಸಲಾಯ್ತು. ಈ ವೇಳೆ ಮೇಜಿನ ಮೇಲೆ ಜಯಲಲಿತಾ ಅವರ ಫೋಟೊ ಇರಿಸಿ ಸಂಪುಟ ಸಭೆ ನಡೆಸಿದ್ದು ವಿಶೇಷ.
