ಹರ್ಯಾಣದ ಸಿರ್ಸಾದಿಂದ 10 ಕಿ.ಮೀ. ದೂರದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯ ಆಶ್ರಮ ಇದೆ. ಇದೊಂದು ರೀತಿ ಪ್ರತ್ಯೇಕ ಸಾಮ್ರಾಜ್ಯದಂತೆಯೇ ಇದೆ. 1000 ಎಕರೆ ವ್ಯಾಪ್ತಿಯ ಆಶ್ರಮದ ವಲಯದ ಸುತ್ತ ಕಾಂಪೌಂಡ್ ಇದೆ. ಇಲ್ಲಿಯೇ ಬೇರೆ ಮಾರುಕಟ್ಟೆ, ಪೆಟ್ರೋಲ್ ಪಂಪು, ಅಂಗಡಿಗಳು, ಮಲ್ಟಿಪ್ಲೆಕ್ಸ್, ಆಸ್ಪತ್ರೆಗಳು, ಶಾಲೆ-ಕಾಲೇಜು, ಮೈದಾನ, ಕೃಷಿ ಜಮೀನುಗಳು ಇವೆ. ಇನ್ನೂ ವಿಶೇಷವೆಂದರೆ ಇಲ್ಲಿ ಪ್ರತ್ಯೇಕ ಕರೆನ್ಸಿ ವ್ಯವಸ್ಥೆಯೂ ಇದೆ.

ಸಿರ್ಸಾ(ಆ.28): ಹರ್ಯಾಣದ ಸಿರ್ಸಾದಿಂದ 10 ಕಿ.ಮೀ. ದೂರದಲ್ಲಿ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯ ಆಶ್ರಮ ಇದೆ. ಇದೊಂದು ರೀತಿ ಪ್ರತ್ಯೇಕ ಸಾಮ್ರಾಜ್ಯದಂತೆಯೇ ಇದೆ. 1000 ಎಕರೆ ವ್ಯಾಪ್ತಿಯ ಆಶ್ರಮದ ವಲಯದ ಸುತ್ತ ಕಾಂಪೌಂಡ್ ಇದೆ. ಇಲ್ಲಿಯೇ ಬೇರೆ ಮಾರುಕಟ್ಟೆ, ಪೆಟ್ರೋಲ್ ಪಂಪು, ಅಂಗಡಿಗಳು, ಮಲ್ಟಿಪ್ಲೆಕ್ಸ್, ಆಸ್ಪತ್ರೆಗಳು, ಶಾಲೆ-ಕಾಲೇಜು, ಮೈದಾನ, ಕೃಷಿ ಜಮೀನುಗಳು ಇವೆ. ಇನ್ನೂ ವಿಶೇಷವೆಂದರೆ ಇಲ್ಲಿ ಪ್ರತ್ಯೇಕ ಕರೆನ್ಸಿ ವ್ಯವಸ್ಥೆಯೂ ಇದೆ.

10 ರು. ಮೌಲ್ಯದ ‘ಸಚ್’ ಹೆಸರಿನ ಪ್ಲಾಸ್ಟಿಕ್ ನಾಣ್ಯಗಳು ಇಲ್ಲಿ ಇವೆ. ಅಂಗಡಿಯಲ್ಲಿ ನೀವೇನಾದರೂ 70 ರು. ಮೌಲ್ಯದ ವಸ್ತುವಿಗೆ 100 ರು. ನೀಡಿದಿರಿ ಎಂದುಕೊಳ್ಳಿ. ಆಗ ಅಂಗಡಿಕಾರ ತನ್ನ ಬಳಿ ಚಿಲ್ಲರೆ ಇಲ್ಲವಾದರೆ 10 ರು. ಮೌಲ್ಯದ ಈ ೩ ಪ್ಲಾಸ್ಟಿಕ್ ನಾಣ್ಯ ಕೊಡುತ್ತಾನೆ.

ಈ ಸಚ್ ನಾಣ್ಯಗಳು ಡೇರಾ ವ್ಯಾಪ್ತಿಯಲ್ಲಿ ಇರುವ ಎಲ್ಲ ಅಂಗಡಿಗಳಲ್ಲೂ ನಡೆಯುತ್ತವೆ. ಇವುಗಳ ಮೇಲೆ ‘ಜನ ಧನ್ ಸತ್ಗುರು ತೇರಾ ಹಿ ಆಸ್ರಾ, ಸಚ್ಚಾ ಸೌದಾ ಸಿರ್ಸಾ’ ಎಂದು ಟಂಕಿಸಿರುತ್ತಾರೆ.