ಹಿರಿಯ ನಾಯಕರಿಗೆ ಕೆಪಿಸಿಸಿ ಪಟ್ಟ..?

Senior Leaders In KPCC President Post Race
Highlights

ಲೋಕಸಭೆ ಚುನಾವಣೆ ಯಂತಹ ಸವಾಲು ಮುಂದಿರುವ ಕಠಿಣ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಿರಿಯರಿಗೆ ನೀಡುವುದು ಬೇಡ. ಅಧ್ಯಕ್ಷರ ಆಯ್ಕೆ ವೇಳೆ ಹಿರಿಯರು ಹಾಗೂ ಸಂಸದರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು
ಹೈಕಮಾಂಡ್‌ಗೆ ಒತ್ತಾಯಿಸಲು ಹಿರಿಯ ಸಂಸದರು ಸಭೆ ನಡೆಸಿ ನಿರ್ಧರಿಸಿದ್ದಾರೆ.  

ಬೆಂಗಳೂರು: ಲೋಕಸಭೆ ಚುನಾವಣೆ ಯಂತಹ ಸವಾಲು ಮುಂದಿರುವ ಕಠಿಣ ಸಮಯದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಕಿರಿಯರಿಗೆ ನೀಡುವುದು ಬೇಡ. ಅಧ್ಯಕ್ಷರ ಆಯ್ಕೆ ವೇಳೆ ಹಿರಿಯರು ಹಾಗೂ ಸಂಸದರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂದು ಹೈಕಮಾಂಡ್‌ಗೆ ಒತ್ತಾಯಿಸಲು ಹಿರಿಯ ಸಂಸದರು ಸಭೆ ನಡೆಸಿ ನಿರ್ಧರಿಸಿದ್ದಾರೆ. 

ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಸಿದ ರಾಜ್ಯಸಭೆ ಹಾಗೂ ಲೋಕಸಭೆಯ ಹಿರಿಯ ಸದಸ್ಯರು, ದಿನೇಶ್ ಗುಂಡೂರಾವ್ ಅವ ರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಲಾಬಿ ನಡೆಸುತ್ತಿರುವ ಕಿರಿಯರ ಗುಂಪಿನ ವಿರುದ್ಧ ಒಗ್ಗೂಡುವ ತೀರ್ಮಾನವನ್ನು ಕೈಗೊಂಡರು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಪಾಲ್ಗೊಂಡಿದ್ದ ಚಂದ್ರಪ್ಪ, ಬಿ.ವಿ.ನಾಯಕ್, ಪ್ರಕಾಶ್ ಹುಕ್ಕೇರಿ ಹಾಗೂ ರಾಜ್ಯಸಭಾ ಸದಸ್ಯರಾದ ಹರಿಪ್ರಸಾದ್, ರಾಜೀವ್‌ಗೌಡ, ಜಿ.ಸಿ. ಚಂದ್ರಶೇಖರ್, ಎಲ್. ಹನುಮಂತಪ್ಪ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವೇಳೆ ಸಂಸದರ ಮಾತಿಗೆ ಪ್ರಾಮುಖ್ಯತೆ ನೀಡಲೇಬೇಕು ಎಂದು ಹೈಕಮಾಂಡ್ ಭೇಟಿ ಮಾಡಿ ಒತ್ತಾಯ ಮಾಡಲು ನಿರ್ಧರಿಸಿದರು ಎಂದು ಮೂಲಗಳು ಹೇಳಿವೆ. 

ಲೋಕಸಭೆ ಚುನಾವಣೆಯಂತಹ ಕಠಿಣ ಸವಾಲು ಮುಂದಿರುವ ಹಿನ್ನೆಲೆಯಲ್ಲಿ ಹಿರಿಯರು ಹಾಗೂ ಕಿರಿಯರನ್ನು ಸಮನ್ವಯತೆಯಿಂದ ಕೊಂಡೊಯ್ಯುವ ಸಾಮರ್ಥ್ಯವಿರುವ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು. ಲಿಂಗಾಯತರಿಗೆ ಹಾಗೂ ಉತ್ತರ ಕರ್ನಾಟಕದವರಿಗೆ ನೀಡು ವುದಾದರೆ ಎಂ.ಬಿ. ಪಾಟೀಲ್ ಅಥವಾ ಎಚ್.ಕೆ. ಪಾಟೀಲ್ ಹೆಸರು ಪರಿಗಣಿಸಬೇಕು. ದಕ್ಷಿಣ ಭಾಗದವರಿಗೆ ಅವಕಾಶ ನೀಡುವುದಾದರೆ ಬಿ.ಕೆ. ಹರಿಪ್ರಸಾದ್ ಅಥವಾ ಕೆ.ಎಚ್. ಮುನಿಯಪ್ಪ ಅವರಿಗೆ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಸಲಹೆ ನೀಡೋಣ. ಆದರೆ, ಕೃಷ್ಣ ಬೈರೇ ಗೌಡ, ರಿಜ್ವಾನ್ ಹರ್ಷದ್ ಅವರ ಗುಂಪು ದಿನೇಶ್ ಗುಂಡು ರಾವ್ ಪರ ಲಾಬಿ ಯಶಸ್ವಿಯಾಗಲು ಬಿಡದಂತೆ ಚರ್ಚೆ ಗಳು ನಡೆದವು ಎಂದು ಮೂಲಗಳು ಹೇಳಿವೆ. 

ಲೋಕಸಭೆ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಾಬಲ್ಯ ಹಾಗೂ ಹಾಲಿ ಕಾಂಗ್ರೆಸ್ ಸಂಸದರು ಇರುವ ಏಳು ಕ್ಷೇತ್ರಗಳನ್ನು ಬಿಟ್ಟು ಕೊಡಲು ಜೆಡಿಎಸ್ ಕೇಳಿದೆ. ಆದರೆ, ಕಾಂಗ್ರೆಸ್‌ನ ಸಂಸದರು ಇರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂಬ ಆಗ್ರಹ ಕೇಳಿ ಬಂತು. ಇದೇ ವೇಳೆ ಐ.ಟಿ. ಇಲಾಖೆ ಸುಳಿಗೆ ಸಿಲುಕಿರುವ ಡಿಕೆಶಿ ಪರವಾಗಿ ಪಕ್ಷ ನಿಲ್ಲಬೇಕೆಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು. 

loader